ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ವತಿಯಿಂದ ನಡೆದ 60ನೇ ವರ್ಷದ ವಜ್ರಮಹೋತ್ಸವದ ಯಶಸ್ಸಿನ ಶ್ರೇಯಸ್ಸು ಉಡುಪಿಯ ಜನತೆಗೆ ಸಲ್ಲುತ್ತದೆ ಎಂದು ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ ಹೇಳಿದರು.
ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ 60ನೇ ವರ್ಷದ ಸಮಾಪನ ಸಭೆಯಲ್ಲಿ ಮಾತನಾಡಿದ ಅವರು, ಉಡುಪಿ ಜನತೆಯ ಸಹಕಾರ ಹಾಗೂ ಬೆಂಬಲದಿಂದ ವಜ್ರಮಹೋತ್ಸವದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಹೀಗಾಗಿ ಇದರ ಸಂಪೂರ್ಣ ಶ್ರೇಯಸ್ಸನ್ನು ಉಡುಪಿಯ ಜನತೆಗೆ ಸಮರ್ಪಿಸುವುದಾಗಿ ಹೇಳಿದರು.
ವಜ್ರಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಕಾರ್ಯಕರ್ತರ ಉತ್ಸಾಹ ಮತ್ತು ಹಿರಿಯರ ಮಾರ್ಗದರ್ಶನದಿಂದ ಕಡಿಯಾಳಿ ಗಣೇಶೋತ್ಸವವು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗಣೇಶೋತ್ಸವದ ಮೆರವಣಿಗೆಗೆ ವಿಶೇಷ ಮೆರುಗು ನೀಡಿದ ಶಾರದೆ ವೇಷಧಾರಿ ಸಾನ್ವಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್ ವಜ್ರಮಹೋತ್ಸವದ ಕಾರ್ಯಕ್ರಮಗಳ ಅವಲೋಕನ ಮಾಡಿದರು.
ಸಮಿತಿ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ ಸ್ವಾಗತಿಸಿದರು. ಕೋಶಾಧಿಕಾರಿ ಎಂ. ವಲ್ಲಭ ಭಟ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಹಾಗೂ ಅಧ್ಯಕ್ಷ ಪ. ವಸಂತ್ ಭಟ್ ಉಪಸ್ಥಿತರಿದ್ದರು.
ಕಡಿಯಾಳಿ ಗಣೇಶೋತ್ಸವದ ವಜ್ರಮಹೋತ್ಸವ ಯಶಸ್ಸು ಜನತೆಗೆ ಸಮರ್ಪಣೆ

