ಉಡುಪಿ: ರಾಷ್ಟ್ರಸುಧಾ ಮಾಧ್ಯಮ ಬಳಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಡಿಯೋ ಎಡಿಟರ್, ಕ್ಯಾಮರಾಮನ್, ಕಾರ್ಯಕ್ರಮ/ಸುದ್ದಿ ವರದಿಗಾರರು, ಕಾರ್ಯಕ್ರಮ ನಿರೂಪಕರು, ಅಕೌಂಟೆಂಟ್/ರಿಸೆಪ್ಷನಿಸ್ಟ್, ಗ್ರಾಫಿಕ್ ಡಿಸೈನರ್ ಹಾಗೂ ವಾಣಿಜ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಅ.3ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು rashtrasudha@gmail.com ಇ-ಮೇಲ್‌ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 09094 80707 ಸಂಪರ್ಕಿಸಬಹುದು.
ನೇಮಕಾತಿಗೆ ಸಂಬಂಧಿಸಿದಂತೆ ಅ.5ರಂದು ಅಕೌಂಟೆಂಟ್, ರಿಸೆಪ್ಷನಿಸ್ಟ್ ಹಾಗೂ ಕ್ಯಾಮರಾಮನ್; ಅ.6ರಂದು ಎಡಿಟರ್ ಹಾಗೂ ಗ್ರಾಫಿಕ್ ಡಿಸೈನರ್; ಅ.7ರಂದು ಕಾರ್ಯಕ್ರಮ ನಿರೂಪಕರು ಹಾಗೂ ಕಾರ್ಯಕ್ರಮ/ಸುದ್ದಿ ವರದಿಗಾರರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರಸುಧಾ ಮಾಧ್ಯಮ ಬಳಗದ ತಾಂತ್ರಿಕ ಮತ್ತು ಕ್ರಿಯೇಟಿವ್ ಮುಖ್ಯಸ್ಥ ಲಕ್ಷ್ಮೀಶ ಶೆಟ್ಟಿ ಹಾಗೂ ಸಿಇಒ ರಾಮಚಂದ್ರ ಬಾರೆಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


