Friday, October 2, 2026

ಅ.17ರಂದು 9ನೇ ವರ್ಷದ ‘ಉಡುಪಿ ದಾಂಡಿಯಾ’

Must read

ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುವ ಘಟಕದ ನೇತೃತ್ವದಲ್ಲಿ 9ನೇ ವರ್ಷದ ‘ಉಡುಪಿ ದಾಂಡಿಯಾ–2026’ ಕಾರ್ಯಕ್ರಮ ಅ.17ರಂದು ಸಂಜೆ 6ರಿಂದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪೋಸ್ಟರ್‌ನ್ನು ಶಾಸಕ ಯಶ್ಪಾಲ್ ಎ. ಸುವರ್ಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪ. ವಸಂತ್ ಭಟ್, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವಜ್ರಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್, ಕೋಶಾಧಿಕಾರಿ ಎಂ. ವಲ್ಲಭ ಭಟ್, ವಜ್ರಮಹೋತ್ಸವ ಸಮಿತಿ ಕೋಶಾಧಿಕಾರಿ ಮಂಜುನಾಥ್ ಹೆಬ್ಬಾರ್, ಯುವ ಘಟಕದ ಗೌರವಾಧ್ಯಕ್ಷ ಅಶ್ವತ್ಥ್ ದೇವಾಡಿಗ ಹಾಗೂ ಪ್ರಧಾನ ಕಾರ್ಯದರ್ಶಿ ಶೇಯಸ್ ದೇವಾಡಿಗ ಉಪಸ್ಥಿತರಿದ್ದರು.
ಆಹಾರ ಮಳಿಗೆ, ಸೆಲ್ಫಿ ಪಾಯಿಂಟ್:
ಉಡುಪಿ ದಾಂಡಿಯಾದಲ್ಲಿ ವಿಶೇಷ ತಿಂಡಿ–ತಿನಿಸುಗಳ ಆಹಾರ ಮಳಿಗೆ ಹಾಗೂ ಸೆಲ್ಫಿ ಪಾಯಿಂಟ್‌ಗಳನ್ನು ಆಯೋಜಿಸಲಾಗುತ್ತಿದೆ. ಆಹಾರ ಮಳಿಗೆಯನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಉದ್ಘಾಟಿಸಲಿದ್ದಾರೆ ಎಂದು ಯುವ ಘಟಕದ ಅಧ್ಯಕ್ಷ ಪ್ರದೀಪ್ ಶೆಟ್ಟಿ ತಿಳಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here