ಉಡುಪಿ: ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಕೋಮ ಸಂಘರ್ಷಕ್ಕೆ ಪ್ರಚೋದಿಸಿ, ಕೋಮು ಗಲಾಭೆ ಉಂಟು ಮಾಡಲು ಪ್ರೇರೆಪಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು ಕೋಟ ಪೊಲೀಸರು ಮೇ 31ರಂದು ಬಂಧಿಸಿದ್ದಾರೆ.
ಬಂಧಿತನನ್ನು ಉಡುಪಿ ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಎಂದು ಗುರುತಿಸಲಾಗಿದೆ. ರಿಯಾಜ್ ಪರಂಗಿ ಪೇಟೆ ಎಂಬವರ ಹಳೆ ವಿಡಿಯೋವನ್ನು ಶೇರ್ ಮಾಡಿ(ಈಗಾಗಲೇ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ), ಸ್ಥಳೀಯ ಹಿಂದೂ ಯುವಕರನ್ನು ಕೋಮ ಸಂಘರ್ಷಕ್ಕೆ ಪ್ರಚೋದಿಸಿ, ಕೋಮು ಗಲಾಭೆ ಉಂಟು ಮಾಡಲು ಪ್ರೇರೆಪಿಸಿ ರಾಘವೇಂದ್ರ ಕಾಂಚನ್ ಬಾರಿಕೆರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನು. ಈತನ ವಿರುದ್ದ ಕೋಟ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಈತನನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ರಾಘವೇಂದ್ರ ಕಾಂಚನ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಡಬಲ್ ಮರ್ಡರ್ ಕೇಸ್ ಹಾಗೂ ಇತರ ಅನೇಕ ಪ್ರಕರಣಗಳು ಈಗಾಗಲೇ ದಾಖಲಾಗಿವೆ.
ಕೋಟ: ಹಳೆಯ ವಿಡಿಯೋ ಶೇರ್ ಮಾಡಿ ಕೋಮು ಗಲಾಭೆಗೆ ಪ್ರಚೋದನೆ; ಮಾಜಿ ಜಿಪಂ ಸದಸ್ಯನ ಬಂಧನ
More articles

