Monday, April 20, 2026

ಕಾರ್ಕಳ: ಹಟ್ಟಿಯಲ್ಲಿ ಅಗ್ನಿ‌ ಅವಘಡ; ಎರಡು ಕಂಬಳದ ಕೋಣಗಳು ಬೆಂಕಿಗಾಹುತಿ

Must read

ಉಡುಪಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಟ್ಟಿಗೆ ಬೆಂಕಿ‌ ತಗುಲಿ ಎರಡು ಕಂಬಳದ ಕೋಣಗಳು ಸುಟ್ಟುಕರಕಲಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಬೇಲಾಡಿ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಬೇಲಾಡಿ ಅಶೋಕ್ ಶೆಟ್ಟಿಯವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಉಂಟಾಗಿದ್ದು, ಬೆಂಕಿಯ ಕೆನ್ನಾಲೆಗೆ ಸಂಪೂರ್ಣ ಹಟ್ಟಿಗೆ ವ್ಯಾಪಿಸಿದೆ. ಇದರಿಂದ ಅಪ್ಪು ಮತ್ತು ತೋನ್ಸೆ ಹೆಸರಿನ ಎರಡು ಕಂಬಳ ಕೋಣಗಳು ಬೆಂಕಿಗಾಹುತಿಯಾಗಿವೆ.

spot_img

More articles

LEAVE A REPLY

Please enter your comment!
Please enter your name here