Tuesday, April 21, 2026

ಉಡುಪಿ: ವಾದ್ಯ ಕಲಾವಿದ ನೇಣಿಗೆ ಶರಣು

Must read

ಉಡುಪಿ: ಮನೆಯ ಕೊಠಡಿಯಲ್ಲಿ ಮಾಡಿನ ಪಕ್ಕಾಸಿಗೆ ಯುವಕನೊರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಕೆರೆ ವಿದ್ಯೋದಯ ಶಾಲೆಯ ಸಮೀಪ ನಡೆದಿದೆ.

ಮೃತರನ್ನು ಬೈಲಕೆರೆಯ ರಾಮಕೃಷ್ಣ ದೇವಾಡಿಗರ ಪುತ್ರ, ವಾದ್ಯ ಕಲಾವಿದ ಅಶ್ವಥ್ (32) ಎಂದು‌ ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು, ಸುನಿಲ್ ಬೈಲಕೆರೆ ಅವರ ಸಹಾಯದಿಂದ ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ನಗರ ಪೋಲಿಸ್ ಠಾಣೆಯ‌ ಎ. ಎಸ್. ಐ ಸುಭಾಸ್ ಕಾಮತ್, ಹೆಡ್ ಕಾನ್ಸಟೇಬಲ್ ಹರೀಶ್ ಮಾಳ, ಜಯಕರ್ ಕಾನೂನು ಪ್ರಕ್ರಿಯೆ ನಡೆಸಿದರು.

spot_img

More articles

LEAVE A REPLY

Please enter your comment!
Please enter your name here