ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಕಡಿಯಾಳಿಯಲ್ಲಿ ನಾಗರಿಕರಿಗೆ ಉಚಿತ ಹಾಲು ಪಾಯಸ ವಿತರಿಸಲಾಯಿತು.
ಕಡಿಯಾಳಿ ಹೋಟೆಲ್ ಶ್ರೀನಿವಾಸ್ ಮಾಲೀಕ ನರಸಿಂಹ ಕಿಣಿ ಅವರ ನೇತೃತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಯುವ ಉದ್ಯಮಿ ಜಯಂತ ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು.
ಕಡಿಯಾಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಕುಲಾಲ್ ಕಡಿಯಾಳಿ, ಯುವ ಉದ್ಯಮಿ ಎಂ. ವಲ್ಲಭ ಭಟ್, ಮಾಜಿ ನಗರಸಭಾ ಸದಸ್ಯ ಗಿರೀಶ್ ಅಂಚನ್, ಸಾಮಾಜಿಕ ಕಾರ್ಯಕರ್ತರಾದ ಸುವರ್ಧನ್ ನಾಯಕ್, ಮಂಜುನಾಥ್ ಹೆಬ್ಬಾರ್, ಸಂತೋಷ್ ಕಿಣಿ, ಸಂಧ್ಯಾ ಪ್ರಭು, ಶೋಭಾ ಕಾಮತ್, ಸಂದೀಪ್ ಸನಿಲ್ ಹಾಗೂ ಸತ್ಯಸಂಗಮದ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.

