Tuesday, September 17, 2024

ಅಲಹಾಬಾದ್ ವಿಶ್ವವಿದ್ಯಾಲಯದ ಹಾಸ್ಟೆಲ್‌ ನಲ್ಲಿ ಬಾಂಬ್ ಸ್ಫೋಟ: ವಿದ್ಯಾರ್ಥಿಗೆ ಗಂಭೀರ ಗಾಯ

Must read

ಪ್ರಯಾಗರಾಜ್: ಅಲಹಾಬಾದ್ ವಿಶ್ವವಿದ್ಯಾಲಯದ ಹಾಸ್ಟೆಲ್‌ ಕೋಣೆಯೊಂದರಲ್ಲಿ ವಿದ್ಯಾರ್ಥಿಯೋರ್ವ ತಾನೇ ತಯಾರಿಸುತ್ತಿದ್ದ ಬಾಂಬ್‌ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ.


ಗಾಯಗೊಂಡವನನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಎಂ.ಎ ವಿದ್ಯಾರ್ಥಿ ಪ್ರಭಾತ್‌ ಯಾದವ್ ಎಂದು ಗುರುತಿಸಲಾಗಿದೆ. ಈತ ತನ್ನ ಕೋಣೆಯಲ್ಲಿ ಏಕೆ ಬಾಂಬ್‌ ತಯಾರಿಸುತ್ತಿದ್ದನು ಎಂಬ ಮಾಹಿತಿ ತಿಳಿದುಬಂದಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್ ಹೇಳಿದ್ದಾರೆ.


ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳೀಯ ಎಸ್‌ಆರ್‌ಎನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ.

spot_img

More articles

LEAVE A REPLY

Please enter your comment!
Please enter your name here