ಉಡುಪಿ: ಪ್ರೇಕ್ಷಕರ ಕರತಾಡನ, ಹುರಿದುಂಬಿಸುವ ಘೋಷಣೆಗಳು, ನೆಚ್ಚಿನ ಕುಸ್ತಿಪಟುಗಳ ಗೆಲುವಿಗಾಗಿ ಅಭಿಮಾನಿಗಳ ಹರ್ಷೋದ್ಗಾರ. ಎದುರಾಳಿಯನ್ನು ಮಣಿಸಲು ಪಟ್ಟುಗಳ ಪ್ರಯೋಗ, ಗೆಲುವಿಗಾಗಿ ಕೊನೆಯ ಕ್ಷಣದವರೆಗೂ ಸೆಣಸಾಟ. ಇಂತಹ ರೋಚಕ ಕ್ಷಣಗಳಿಗೆ ಸಾಕ್ಷಿಯಾದದ್ದು ಉಚ್ಚಿಲ ದಸರಾ ಅಂಗವಾಗಿ ಆಯೋಜಿಸಿದ್ದ ಅಂತರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಮಂಗಳವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ 232 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಕುಸ್ತಿ ಸಂಘಗಳ ಪಟುಗಳು ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಪಂದ್ಯಾವಳಿಯಲ್ಲಿ ಶಿವಾಜಿ ಫಿಜಿಕಲ್ ಬೋಳಾರ್ ತಂಡದ ಶೌರ್ಯಾ ‘ಉಚ್ಚಿಲ ದಸರಾ ಕುವರಿ’ ಪ್ರಶಸ್ತಿ ಪಡೆದರೆ, ಎಂ.ಪಿ. ಕೋಡಿಕಲ್ ತಂಡದ ಪ್ರಕಾಶ್ ‘ಉಚ್ಚಿಲ ದಸರಾ ಕುಮಾರ್’ ಗೌರವಕ್ಕೆ ಪಾತ್ರರಾದರು. ಶಿವಾಜಿ ಫಿಜಿಕಲ್ ಬೋಳಾರ್ ತಂಡದ ಮನೋಜ್ ಎಸ್.ಎಂ. ‘ಉಚ್ಚಿಲ ದಸರಾ ಕೇಸರಿ’ ಪ್ರಶಸ್ತಿ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಜೈ ಆಂಜನೇಯ ಅಡ್ಯಾರು ಪದವು ತಂಡದ ಕ್ಷಮಾ ಹಾಗೂ ಪುರುಷರ ವಿಭಾಗದಲ್ಲಿ ಎಸ್ಎಂಎಸ್ ಬ್ರಹ್ಮಾವರ ತಂಡದ ಝಮ್ ಉದಯೋನ್ಮುಖ ಕುಸ್ತಿಪಟು ಪ್ರಶಸ್ತಿ ಪಡೆದರು. ಸಮಗ್ರ ತಂಡ ಪ್ರಶಸ್ತಿಯನ್ನು ಶಿವಾಜಿ ಫಿಜಿಕಲ್ ಬೋಳಾರ್ ತಂಡ ತನ್ನದಾಗಿಸಿಕೊಂಡಿತು.
ಪ್ರಶಸ್ತಿ ವಿಜೇತರು
ಉಚ್ಚಿಲ ದಸರಾ ಕುವರಿ ವಿಭಾಗ: 62 ಕೆ.ಜಿ. ವಿಭಾಗದಲ್ಲಿ ಶೌರ್ಯಾ (ಶಿವಾಜಿ ಫಿಜಿಕಲ್ ಬೋಳಾರ್) ಪ್ರಥಮ, ದ್ವಿತಿ (ಜೈ ಆಂಜನೇಯ) ದ್ವಿತೀಯ ಸ್ಥಾನ ಪಡೆದರು. ಯಶ ಜಿ. ಕೋಟ್ಯಾನ್ ಮತ್ತು ಪ್ರಾಪ್ತಿ ಎಲ್. ಶೆಟ್ಟಿ ತೃತೀಯ ಸ್ಥಾನ ಹಂಚಿಕೊಂಡರು.
ಉಚ್ಚಿಲ ದಸರಾ ಕುಮಾರ್ ವಿಭಾಗ: 65 ಕೆ.ಜಿ. ವಿಭಾಗದಲ್ಲಿ ಪ್ರಕಾಶ್ (ಎಂ.ಪಿ. ಕೋಡಿಕಲ್) ಪ್ರಥಮ, ಸಜನ್ (ಎಸ್ಎಂಎಸ್ ಬ್ರಹ್ಮಾವರ) ದ್ವಿತೀಯ ಸ್ಥಾನ ಪಡೆದರು. ಸುಕುಮುನಿ (ಎಂ.ಪಿ. ಕೋಡಿಕಲ್) ಮತ್ತು ಸುರೇಶ್ (ವಿಬಿ ಬೇಂದ್ರೆ) ತೃತೀಯ ಸ್ಥಾನ ಗಳಿಸಿದರು.
ಉಚ್ಚಿಲ ದಸರಾ ಕೇಸರಿ ವಿಭಾಗ: 75 ಕೆ.ಜಿ. ವಿಭಾಗದಲ್ಲಿ ಮನೋಜ್ ಎಸ್.ಎಂ. (ಶಿವಾಜಿ ಫಿಜಿಕಲ್ ಬೋಳಾರ್) ಪ್ರಥಮ, ಗಗನ್ ಸಿ. ಶೆಟ್ಟಿ (ಶಿವಾಜಿ ಫಿಜಿಕಲ್ ಬೋಳಾರ್) ದ್ವಿತೀಯ ಸ್ಥಾನ ಪಡೆದರು. ಅನನ್ಯ ಅಮೀನ್ (ವಿಬಿ ಬೇಂಗ್ರೆ) ಮತ್ತು ನವರಾಜ್ (ಶಿವಾಜಿ ಫಿಜಿಕಲ್ ಬೋಳಾರ್) ತೃತೀಯ ಸ್ಥಾನ ಗಳಿಸಿದರು.
ಪುರುಷರ ವಿಭಾಗದ ವಿಜೇತರು
34–38 ಕೆ.ಜಿ. ವಿಭಾಗದಲ್ಲಿ ನಿಹಾಲ್ (ವಿಬಿ ಬೇಂಗ್ರೆ) ಪ್ರಥಮ, ಗಯಾನ್ (ವಿಬಿ ಬೇಂಗ್ರೆ) ದ್ವಿತೀಯ ಸ್ಥಾನ ಪಡೆದರು. 41 ಕೆ.ಜಿ. ವಿಭಾಗದಲ್ಲಿ ರಾಜು (ಡಿವಿಎಚ್ ದಡ್ಡಲ್ಕಾಡ್) ಪ್ರಥಮ, ಮನೋಜ್ (ವಿಬಿ ದಡ್ಡಲ್ಕಾಡ್) ದ್ವಿತೀಯ ಸ್ಥಾನ ಗಳಿಸಿದರು.
46 ಕೆ.ಜಿ. ವಿಭಾಗದಲ್ಲಿ ಸಂತೋಷ್ ಪ್ರಥಮ ಸ್ಥಾನ ಪಡೆದಿದ್ದಾರೆ.
50 ಕೆ.ಜಿ. ವಿಭಾಗದಲ್ಲಿ ಪ್ರತೀಕ್ ಪುತ್ರನ್ (ಜೈ 43 ವೀರ ಮಾರುತಿ ವ್ಯಾಯಾಮ ಶಾಲೆ, ತೊಕ್ಕೊಟ್ಟು) ಪ್ರಥಮ, ಕುಮಾರ (ಎಂ.ಪಿ. ಕೋಡಿಕಲ್) ದ್ವಿತೀಯ ಸ್ಥಾನ ಪಡೆದರು. 57 ಕೆ.ಜಿ. ವಿಭಾಗದಲ್ಲಿ ಧರ್ಮರಾಜ್ (ಎಂ.ಪಿ. ಕೋಡಿಕಲ್) ಪ್ರಥಮ, ಆದಿತ್ಯ (ಅಡ್ಯಾರು ಪದವು) ದ್ವಿತೀಯ ಸ್ಥಾನ ಗಳಿಸಿದರು.
61 ಕೆ.ಜಿ. ವಿಭಾಗದಲ್ಲಿ ರಂಗನಾಥ್ (ದಡ್ಡಲ್ಕಾಡ್) ಪ್ರಥಮ, ಮದನ್ (ಕೋಡಿಕಲ್) ದ್ವಿತೀಯ ಸ್ಥಾನ ಪಡೆದರು. 86 ಕೆ.ಜಿ. ವಿಭಾಗದಲ್ಲಿ ಕೆ.ಜಿ. ನಂದಕೃಷ್ಣ (ಶಿವಾಜಿ ಫಿಜಿಕಲ್ ಬೋಳಾರ್) ಪ್ರಥಮ, ಘನಶ್ಯಾಮ್ (ಆಂಜನೇಯ ಸಸಿಹಿತ್ತು) ದ್ವಿತೀಯ ಸ್ಥಾನ ಗಳಿಸಿದರು. 86 ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ಸುರೇಶ್ (ಎಂ.ಪಿ. ಕೋಡಿಕಲ್) ಪ್ರಥಮ, ಸಾತ್ವಿಕ್ ರೈ (ಗೋವಿಂದ ದಾಸ್ ಕಾಲೇಜು, ಸುರತ್ಕಲ್) ದ್ವಿತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದ ವಿಜೇತರು
32–36 ಕೆ.ಜಿ. ವಿಭಾಗದಲ್ಲಿ ಕ್ಷಮಾ (ಜೈ ಆಂಜನೇಯ ಅಡ್ಯಾರು ಪದವು) ಪ್ರಥಮ, ಮಿತಾಲಿ (ಜೈ ಆಂಜನೇಯ) ದ್ವಿತೀಯ ಸ್ಥಾನ ಪಡೆದರು. ಮತ್ತೊಂದು ವಿಭಾಗದಲ್ಲಿ ವರ್ಷ (ರಾಮಾಂಜನೇಯ ಅಡ್ಯಾರು) ಪ್ರಥಮ, ಸಿಮಾನಿ (ಎಸ್ಎಂಎಸ್ ಬ್ರಹ್ಮಾವರ) ದ್ವಿತೀಯ ಸ್ಥಾನ ಗಳಿಸಿದರು.
46 ಕೆ.ಜಿ. ವಿಭಾಗದಲ್ಲಿ ತನುಶ್ರೀ (ಎಂ.ಪಿ. ಕೋಡಿಕಲ್) ಪ್ರಥಮ, ತನುಶ್ರೀ (ಜೈ ಆಂಜನೇಯ ಅಡ್ಯಾರು ಪದವು) ದ್ವಿತೀಯ ಸ್ಥಾನ ಪಡೆದರು. 56 ಕೆ.ಜಿ. ವಿಭಾಗದಲ್ಲಿ ದೀಕ್ಷಾ (ಶಿವಾಜಿ ಫಿಜಿಕಲ್ ಬೋಳಾರ್) ಪ್ರಥಮ, ತೃಷಾ ಎಸ್. ಸುವರ್ಣ (ವಿಬಿ ಬೆಂಗರೆ) ದ್ವಿತೀಯ ಸ್ಥಾನ ಗಳಿಸಿದರು.
ಮತ್ತೊಂದು ವಿಭಾಗದಲ್ಲಿ ದಿಯಾ ಟಿ. ಸಾಲ್ಯಾನ್ (ಶಿವಾಜಿ ಫಿಜಿಕಲ್ ಬೋಳಾರ್) ಪ್ರಥಮ, ಕಾವ್ಯ (ಶಿವಾಜಿ ಫಿಜಿಕಲ್ ಬೋಳಾರ್) ದ್ವಿತೀಯ ಸ್ಥಾನ ಪಡೆದರು. 58 ಕೆ.ಜಿ. ವಿಭಾಗದಲ್ಲಿ ಸಾಕ್ಷಿ (ಶಿವಾಜಿ ಫಿಜಿಕಲ್ ಬೋಳಾರ್) ಪ್ರಥಮ, ತೇಜಸ್ವಿನಿ (ಶಿವಾಜಿ ಫಿಜಿಕಲ್ ಬೋಳಾರ್) ದ್ವಿತೀಯ ಸ್ಥಾನ ಗಳಿಸಿದರು. 28ರಿಂದ 76 ಕೆ.ಜಿ. ಎಂದು ನಮೂದಿಸಿರುವ ವಿಭಾಗದಲ್ಲಿ ಶಝಾ (ಶಿವಾಜಿ ಫಿಜಿಕಲ್ ಬೋಳಾರ್) ಪ್ರಥಮ, ಅದಿತಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದರು.
ಯುವ ಕುಸ್ತಿಪಟುಗಳಿಗೆ ಸ್ಪರ್ಧೆಯ ಅವಕಾಶ ಕಲ್ಪಿಸುವುದರ ಜತೆಗೆ, ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಪಂದ್ಯಾವಳಿ ಪ್ರೇಕ್ಷಕರ ಗಮನ ಸೆಳೆಯಿತು. ವಿವಿಧ ವಿಭಾಗಗಳಲ್ಲಿ ನಡೆದ ಪೈಪೋಟಿ ಕುಸ್ತಿಪಟುಗಳ ಕೌಶಲ ಮತ್ತು ದೈಹಿಕ ಸಾಮರ್ಥ್ಯಕ್ಕೆ ವೇದಿಕೆಯಾಯಿತು
ಶೌರ್ಯಾಗೆ ‘ಕುವರಿ’, ಪ್ರಕಾಶ್ಗೆ ‘ಕುಮಾರ್’ ಗೌರವ; ಮನೋಜ್ಗೆ ‘ಕೇಸರಿ’ ಪ್ರಶಸ್ತಿ | ಸಮಗ್ರ ತಂಡ ಪ್ರಶಸ್ತಿ ಶಿವಾಜಿ ಫಿಜಿಕಲ್ ಬೋಳಾರ್ಗೆ

