Friday, August 28, 2026

ದುಬೈ; ಮೂಳೂರು ‘ಅಲ್ ಖಮರ್ ಟ್ರಸ್ಟ್’ನ ಅಧ್ಯಕ್ಷರಾಗಿ ಹಾಜಿ ಸುಲೈಮಾನ್ ಮೂಳೂರು ಆಯ್ಕೆ

Must read

ಉಡುಪಿ: ಅಲ್ ಖಮರ್ ಟ್ರಸ್ಟ್ ಮೂಳೂರು ಇದರ 2026–27ನೇ ಸಾಲಿನ 31ನೇ ವಾರ್ಷಿಕ ಮಹಾಸಭೆ (AGM)ಯು ದುಬೈ ವಿಮಾನ ನಿಲ್ದಾಣ ಟರ್ಮಿನಲ್-2ರ ಎದುರಿನ ಘಝಲ್ ಪಾರ್ಟಿ ಹಾಲ್ ನಲ್ಲಿ ಭಾನುವಾರ ಸದಸ್ಯರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಅಲ್ ಖಮರ್ ಟ್ರಸ್ಟ್ ಮೂಳೂರು ಇದರ ನೂತನ ಅಧ್ಯಕ್ಷರಾಗಿ ಹಾಜಿ ಸುಲೈಮಾನ್ ಮೂಳೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಕ್ರಾಮ್ ಮೊಹಮ್ಮದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇದೇ ವೇಳೆ ಇತರ ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಯಿತು.

ಹಿರಿಯ ಮಾರ್ಗದರ್ಶಕ ತಂಡ:
ಗೌರವಾಧ್ಯಕ್ಷರು: ಹಾಜಿ ಎಂ.ಇ. ಮೂಳೂರು ಹಾಗೂ ಹಾಜಿ ಯೂಸುಫ್ ಉಮರ್
ಮೂಳೂರು ಟ್ರಸ್ಟ್ ಅಧ್ಯಕ್ಷರು: ಎಂ.ಇ. ಉಸ್ಮಾನ್

ನೂತನ ಪದಾಧಿಕಾರಿಗಳು:
ಉಪಾಧ್ಯಕ್ಷರು: ಮೊಹಮ್ಮದ್ ಶಮೀರ್ ಬರೂದ್, ಅಬ್ದುಲ್ ಹಮೀದ್ ತೋಟ
ಜಂಟಿ ಕಾರ್ಯದರ್ಶಿಗಳು: ಸುಹೈಬ್ ಕರೀಂ, ರಶೀದ್ ಇಸ್ಮಾಯಿಲ್
ಖಜಾಂಚಿ: ಆದಿಲ್ ಕರೀಂ
ಜಂಟಿ ಖಜಾಂಚಿ: ಮೊಹಮ್ಮದ್ ಜುನೈದ್
ಲೆಕ್ಕಪರಿಶೋಧಕ: ರಫೀಕ್ ಉಚ್ಚಿಲ
ಕಾರ್ಯಕಾರಿ ಸಮಿತಿ ಅಧ್ಯಕ್ಷರು: ಅಬ್ದುಲ್ ಸಮದ್ ಬಿರಾಲಿ
ಕಾರ್ಯಕ್ರಮ ಸಂಯೋಜಕರು: ಇಸ್ಮಾಯಿಲ್ ಅಬ್ದುಲ್ ರಝಾಕ್, ಅಮಾನುಲ್ಲಾ ಅಹ್ಮದ್, ನೌಫಲ್ ಮೊಹಮ್ಮದ್
ಸಭಾ ಸಂಯೋಜಕರು: ನವೀಝ್ ರಜಬ್, ಇಸ್ಮಾಯಿಲ್ ಬಾಬಾ

ಕಾರ್ಯಕಾರಿ ಸಮಿತಿ ಸದಸ್ಯರು: ಜಮಾಲ್, ಇಬ್ರಾಹಿಂ ಕಳತ್ತೂರು, ಅಬ್ದುಲ್ ರಹಿಮಾನ್, ಸಿರಾಜ್ ಅಬ್ದುಲ್ ಖಾದರ್, ಮೊಹಮ್ಮದ್ ಶಫಾನ್, ಇಸ್ಮಾಯಿಲ್ ಅಬ್ದುಲ್ ಕರೀಂ, ಫಾರೂಕ್ ರಜಬ್, ಮಕ್ಸೂದ್ ಅಹ್ಮದ್ ಬಾವಾ ಹಾಗೂ ಅಬ್ದುಲ್ ರಶೀದ್ ಮೊಹಮ್ಮದ್

ಭಾರತ ಪ್ರತಿನಿಧಿಗಳು: ಮುರಾದ್ ಅಲಿ, ಶಂಸುದ್ದೀನ್ ಬರೂದ್ ಹಾಗೂ ಹಮೀದ್ ಯೂಸುಫ್
ಮುಖ್ಯ ಸಲಹೆಗಾರರು: ಫಕೀರ್ ಅಹ್ಮದ್, ಶಾಬಾನ್ ಅಬ್ದುಲ್ ರಝಾಕ್, ಹಂಝ ಹಮಬ್ಬಾ ಹಾಗೂ ಅಹ್ಮದ್ ಬಾವಾ

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಹಾಜಿ ಸುಲೈಮಾನ್ ಮೂಳೂರು ಅವರು, ಅಲ್ ಖಮರ್‌ನ ಮುಖ್ಯ ಗುರಿ ಅಗತ್ಯವಿರುವವರಿಗೆ ತಕ್ಷಣ ಸಹಾಯ ಮಾಡುವುದು ಎಂದು ಹೇಳಿದರು. ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ಸೇವೆ ಮಾಡುವ ಎಂದು ಹೇಳಿದರು.

ಸಭೆಯಲ್ಲಿ ಗೌರವಾಧ್ಯಕ್ಷ ಹಾಜಿ ಎಂ.ಇ. ಮೂಳೂರು ಅವರು ಮಾತನಾಡಿ, ಸಂಘಟನೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಐಕ್ಯತೆ, ತಂಡದ ಕೆಲಸ ಮತ್ತು ಸಮರ್ಪಿತ ನಾಯಕತ್ವದ ಅಗತ್ಯವನ್ನು ಒತ್ತಿಹೇಳಿದರು.

ಮುಖ್ಯ ಸಲಹೆಗಾರ ಫಕೀರ್ ಅಹ್ಮದ್ ಅವರು ಅಲ್ ಖಮರ್ ಟ್ರಸ್ಟ್‌ನ ಇತಿಹಾಸ, ಉದ್ದೇಶ ಹಾಗೂ ಸಾಧನೆಗಳ ಕುರಿತು ಪರಿಚಯಾತ್ಮಕ ಭಾಷಣ ಮಾಡಿದರು.

ತವಕ್ಕಲ್ ಓವರ್‌ಸೀಸ್ ಅಧ್ಯಕ್ಷ ಅಶ್ಫಾಕ್ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ಯಶಸ್ವಿ ಅವಧಿಗೆ ಶುಭಾಶಯಗಳನ್ನು ಕೋರಿದರು.

ನಿರ್ಗಮಿತ ಅಧ್ಯಕ್ಷ ನೌಫಲ್ ಮೊಹಮ್ಮದ್, ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರು ಮತ್ತು ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು. ವಾರ್ಷಿಕ ಚಟುವಟಿಕೆಗಳ ವರದಿಯನ್ನು ಅಬ್ದುಲ್ ಹಮೀದ್ ತೋಟ ಮಂಡಿಸಿದರು. ಖಜಾಂಚಿ ಆದಿಲ್ ಕರೀಂ ವಾರ್ಷಿಕ ಹಣಕಾಸು ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ಮೂಳೂರು ಜಮಾಅತ್ ವೆಲ್ಫೇರ್ ಫೋರಂನ ಡೆವಲಪ್ಮೆಂಟ್ ಛೇರ್ಮನ್
ಇಲ್ಯಾಸ್ ಉಮರ್ ಹಾಜರಿದ್ದರು.

ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್ ಬಿರಾಲಿ, ಯುವಜನರನ್ನು ಟ್ರಸ್ಟ್ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ತಿಳಿಸಿ, ಮುಂದಿನ ದಿನಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ವಿವರಿಸಿದರು.

ಕಾರ್ಯಕ್ರಮವು ಹಾಜಿ ಎಂ.ಇ. ಮೂಳೂರು ಅವರ ದುವಾ ಹಾಗೂ ರಶೀದ್ ಇಸ್ಮಾಯಿಲ್ ಅವರ ಕಿರಾತ್ ನೊಂದಿಗೆ ಆರಂಭಗೊಂಡಿತು. ಅತಿಥಿಗಳನ್ನು ಮತ್ತು ಸದಸ್ಯರನ್ನು ಅಬ್ದುಲ್ ಸಮದ್ ಬಿರಾಲಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮವನ್ನು ಇಕ್ರಾಮ್ ಮೊಹಮ್ಮದ್ ಅಚ್ಚುಕಟ್ಟಾಗಿ ನಿರೂಪಿಸಿದರು.

spot_img

More articles

LEAVE A REPLY

Please enter your comment!
Please enter your name here