Tuesday, August 18, 2026

ಮುದರಂಗಡಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Must read

ಉಡುಪಿ: ಲಯನ್ಸ್ ಕ್ಲಬ್ ಮುದರಂಗಡಿ, ಮುದರಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಗಣೇಶೋತ್ಸವ ಸಮಿತಿ ಸಹಯೋಗದಲ್ಲಿ ಮುದರಂಗಡಿಯ ಸಾಂತೂರು ಅಂಗನವಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ರಘುರಾಮ ನಾಯಕ್ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಅಂತೋನಿ ವಿನ್ಸೆಂಟ್ ಡಿಸೋಜ ದುರ್ಗದಕಟ್ಟೆ ಧ್ವಜಾರೋಹಣ ನೆರವೇರಿಸಿದರು. ಲಯನ್ ಅಂತೋನಿ ವಿನ್ಸೆಂಟ್ ಡಿಸೋಜ ಹಾಗೂ ಲಯನ್ ಜೆ.ಬಿ. ಡಿಸೋಜ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಾಂತೂರು ಅಂಗನವಾಡಿ ಶಿಕ್ಷಕಿ ಯಶೋಧಾ ಪೂಜಾರ್ತಿ ಹಾಗೂ ಸಹಾಯಕ ಸಿಬ್ಬಂದಿ ಗೀತಾ ಅವರನ್ನು ಸನ್ಮಾನಿಸಲಾಯಿತು. ಲಯನ್ ರಿಯಾಜ್ ಸಾಹೇಬ್ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮುದರಂಗಡಿಯ ಖಜಾಂಜಿ ಲಯನ್ ಫೆಲಿಕ್ಸ್ ಡಿಸೋಜ, ಸದಸ್ಯರು, ಮುದರಂಗಡಿ ಲಿಯೋ ಸಂಚಾಲಕಿ ಲಯನ್ ಶೆರಿನ್ ಕ್ರಾಸ್ತ, ಲಯನ್ಸ್ ಹಾಗೂ ಲಿಯೋ ಕ್ಲಬ್ ಸದಸ್ಯರು, ಮುದರಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹಾಗೂ ಸದಸ್ಯರು, ಗಣೇಶೋತ್ಸವ ಸಮಿತಿ ಸದಸ್ಯರು, ಅಂಗನವಾಡಿ ಪುಟಾಣಿ ಮಕ್ಕಳು, ಪೋಷಕರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here