ಉಡುಪಿ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಸರ್ಕಾರಿ ಸಾಮ್ಯದ ತೈಲ ಕಂಪೆನಿಗಳಿಂದ ಉಡುಪಿ ಜಿಲ್ಲೆಗೆ ಸರಬರಾಜು ಮಾಡುತ್ತಿರುವ ಗೃಹಬಳಕೆ ಎಲ್ ಪಿ ಜಿ ಅನಿಲ ಪಡೆಯುತ್ತಿರುವ ಇಕೆವೈಸಿ ಮಾಡಿಕೊಳ್ಳಲು ಬಾಕಿ ಇರುವ ಗ್ರಾಹಕರು ಇದೇ ಅಗಸ್ಟ್ 15 ನೇ ತಾರೀಖಿನೊಳಗೆ ಎಲ್ ಪಿ ಜಿ ಗೃಹಬಳಕೆ ಅನಿಲ ಪಡೆಯುತ್ತಿರುವ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಕಡ್ಡಾಯವಾಗಿ ಇ ಕೆ ವೈ ಸಿ ಮಾಡಿಸಿಕೊಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

