Wednesday, October 14, 2026

ಉಡುಪಿ: ಯುವತಿ ನೇಣಿಗೆ ಶರಣು- ಕಾರಣ ನಿಗೂಢ

Must read

ಉಡುಪಿ: ಮಲ್ಪೆ ಕಲ್ಮಾಡಿಯ ಯುವತಿಯೊರ್ವಳು ನೇಣಿಗೆ ಶರಣಾದ ಘಟನೆ ಬುಧವಾರ ನಡೆದಿದೆ. ಹೊಟೇಲ್‌ನ ಉದ್ಯೋಗಿ, ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಕೃತಿ ಬಂಗೇರ(27) ಆತ್ಮಹತ್ಯೆ ಮಾಡಿಕೊಂಡ ಯುವತಿ.

ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಕಲ್ಮಾಡಿಯ ಮನೆಯಲ್ಲಿ ವಾಸವಾಗಿದ್ದ ಕೃತಿ ಇಂದು ಮನೆಯ ಕೊಠಡಿಯಲ್ಲಿ ಚೂಡಿದಾರದ ಶಾಲಿನಲ್ಲಿ ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆ ಕಳೆದ ಕೆಲವು ದಿನಗಳಲ್ಲಿ ಒತ್ತಡ ರೀತಿಯಲ್ಲಿ ವರ್ತಿಸುತ್ತಿದ್ದಳು ಎಂದು ಮನೆಯವರು ತಿಳಿಸಿದ್ದಾರೆ. ಸಹೋದರಿ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

spot_img

More articles

LEAVE A REPLY

Please enter your comment!
Please enter your name here