Thursday, October 15, 2026

ಉಚ್ಚಿಲ ದಸರಾ ನೃತ್ಯೋತ್ಸವದಲ್ಲಿ ಉಡುಪಿಯ ಎಕ್ಸ್‌ಟ್ರೀಮ್ ಡಾನ್ಸ್ ಅಕಾಡೆಮಿಗೆ ಪ್ರಥಮ ಬಹುಮಾನ

Must read

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವ–2026ರ ಅಂಗವಾಗಿ ರವಿವಾರ ರಾತ್ರಿ ಆಯೋಜಿಸಲಾದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ‘ದಸರಾ ನೃತ್ಯೋತ್ಸವ’ ನೃತ್ಯ ಸ್ಪರ್ಧೆ ಪ್ರೇಕ್ಷಕರ ಮನಸೂರೆಗೊಳಿಸಿತು.
ವಿವಿಧ ತಂಡಗಳ ಕಲಾವಿದರು ಲಯಬದ್ಧ ಹೆಜ್ಜೆಗಳು, ವೈವಿಧ್ಯಮಯ ನೃತ್ಯಶೈಲಿ ಹಾಗೂ ಆಕರ್ಷಕ ಪ್ರದರ್ಶನಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಸಂಗೀತ ಮತ್ತು ನೃತ್ಯದ ಸಮ್ಮಿಲನದಲ್ಲಿ ನಡೆದ ಸ್ಪರ್ಧೆ ಉಚ್ಚಿಲ ದಸರಾ ಮಹೋತ್ಸವದ ಸಾಂಸ್ಕೃತಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು.
ಸ್ಪರ್ಧೆಯಲ್ಲಿ ಉಡುಪಿಯ ಎಕ್ಸ್‌ಟ್ರೀಮ್ ಡಾನ್ಸ್ ಅಕಾಡೆಮಿ ಪ್ರಥಮ ಸ್ಥಾನ ಪಡೆದುಕೊಂಡಿತು. ಸಾಸ್ತಾನದ ಸ್ಟೆಪ್ ಅಂಡ್ ಸ್ಟೈಲ್ ಡಾನ್ಸ್ ಕ್ರೂ ದ್ವಿತೀಯ, ಮಂಗಳೂರಿನ ಎಡಪದವಿನ ಡ್ಯಾನ್ಸಿಂಗ್ ಸ್ಟಾರ್ಸ್ ಡಾನ್ಸ್ ಸ್ಟುಡಿಯೋ ತೃತೀಯ ಹಾಗೂ ಬೆಂಗಳೂರಿನ ಎ.ಎಂ.ಡಿ.ಎಸ್. ಡಾನ್ಸ್ ಸ್ಟುಡಿಯೋ ಚತುರ್ಥ ಸ್ಥಾನ ಗಳಿಸಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಡುಪಿ ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ಗಿರಿಧರ ಸುವರ್ಣ, ಮನೋಜ್ ಕಾಂಚನ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ ಹಾಗೂ ರತ್ನಾಕರ ಸಾಲ್ಯಾನ್ ಮಲ್ಪೆ ಉಪಸ್ಥಿತರಿದ್ದರು.
ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಸಹನಾ ಚೇತನ್, ಅರುಣ್ ರಾಜ್ ಶೆಟ್ಟಿ ಹಾಗೂ ರವಿ ಸೂರ್ಯಕಾಂತ್ ಶೇಟ್ ಕಾರ್ಯನಿರ್ವಹಿಸಿದರು.

spot_img

More articles

LEAVE A REPLY

Please enter your comment!
Please enter your name here