Sunday, June 7, 2026

ಸೀನಿಯ‌ರ್ ಛೇಂಬರ್ ಇಂಟರ್‌ನ್ಯಾಷನಲ್ ಉಡುಪಿ ಕೋಸ್ಟಲ್ ಲೀಜನ್‌ನ ಪದಪ್ರದಾನ

Must read

ಉಡುಪಿ: ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಉಡುಪಿ ಕೋಸ್ಟಲ್ ಲೀಜನ್‌ನ 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ಚಂದ್ರಶೇಖರ್ ಎಸ್.ವಿ., ಕಾರ್ಯದರ್ಶಿಯಾಗಿ ಸುನಂದಾ ಹಾಗೂ ಕೋಶಾಧಿಕಾರಿಯಾಗಿ ಮಮತಾ ಅಮೀನ್ ಪದಗ್ರಹಣ ಮಾಡಿದರು.
ನಗರದ ಓಷನ್ ಪಾರ್ಲರ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪದಪ್ರದಾನ ಸಮಾರಂಭವನ್ನು ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್‌ನ ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್. ಜಯೇಶ್ ಉದ್ಘಾಟಿಸಿದರು. ಉಡುಪಿ ಕೋಸ್ಟಲ್ ಲೀಜನ್‌ನ ನಿರ್ಗಮಿತ ಅಧ್ಯಕ್ಷೆ ಝಿನಾತ್ ಅಧ್ಯಕ್ಷತೆ ವಹಿಸಿದ್ದರು.

ಪ್ರಾಧ್ಯಾಪಕ ಡಾ. ಜಯರಾಮ್ ಶೆಟ್ಟಿಗಾರ್ ದಿಕ್ಸೂಚಿ ಭಾಷಣ ಮಾಡಿದರು. ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್‌ನ ಮ್ಯಾನೇಜ್ಮೆಂಟ್ ನಿರ್ದೇಶಕ ಸಿದ್ದಗಂಗಯ್ಯ, ಉಪಾಧ್ಯಕ್ಷ ಕುಮಾರ್ ಕೂರ್ಸೆ, ತರಬೇತಿ ವಿಭಾಗದ ನಿರ್ದೇಶಕ ಹುಸೈನ್ ಹೈಕಾಡಿ, ಸಂಯೋಜಕಿ ಬಿಂದು ತಂಗಪ್ಪನ್ ಹಾಗೂ ಕೋಶಾಧಿಕಾರಿ ಗೀತಾ ರಾವ್ ಉಪಸ್ಥಿತರಿದ್ದರು.
ಪದಗ್ರಹಣದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಡಾ. ಚಂದ್ರಶೇಖರ್ ಎಸ್.ವಿ., ತಮ್ಮ ಅವಧಿಯಲ್ಲಿ ವನಮಹೋತ್ಸವ ಸೇರಿದಂತೆ ಸಾಮಾಜಿಕ ಸೇವೆಗೆ ಸಂಬಂಧಿಸಿದ 12 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಂಸ್ಥೆಯ ಬೆಳವಣಿಗೆಗೆ ಎಲ್ಲ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಜಯೇಶ್, ಸಿದ್ದಗಂಗಯ್ಯ, ಡಾ. ಜಯರಾಮ್ ಶೆಟ್ಟಿಗಾರ್, ನಿರ್ಗಮಿತ ಅಧ್ಯಕ್ಷೆ ಝಿನಾತ್ ಹಾಗೂ ಹುಸೈನ್ ಹೈಕಾಡಿ ಅವರನ್ನು ಸನ್ಮಾನಿಸಲಾಯಿತು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.

spot_img

More articles

LEAVE A REPLY

Please enter your comment!
Please enter your name here