Friday, August 28, 2026

ಪರ್ಕಳದಲ್ಲಿ ಆ.30ರಂದು ‘ವಿವೇಕ ಸಂಪದ ಓದುಗರ ಸಮಾವೇಶ’

Must read

ಉಡುಪಿ: ವಿವೇಕ ಜಾಗೃತ ಬಳಗ ಇದರ ವತಿಯಿಂದ ‘ವಿವೇಕ ಸಂಪದ ಓದುಗರ ಸಮಾವೇಶ’ ಆ.30ರಂದು ಪರ್ಕಳದಲ್ಲಿ ನಡೆಯಲಿದೆ.
ಪರ್ಕಳ ಪ್ರೌಢಶಾಲೆ ಬಳಿಯ ಶ್ರೀ ಸುರಕ್ಷಾ ಸಭಾಭವನದ 2ನೇ ಮಹಡಿಯಲ್ಲಿ ಸಂಜೆ 4.30ರಿಂದ 6.30ರವರೆಗೆ ಕಾರ್ಯಕ್ರಮ ನಡೆಯಲಿದೆ. ರೋಟರಿ ಕ್ಲಬ್, ಪರ್ಕಳದ ಅಧ್ಯಕ್ಷ ರಾಮಮೂರ್ತಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದು, ಕುಂದಾಪುರದ ಚಿಂತಕ ಮಹೇಶ್ ವಕ್ವಾಡಿ ಮಾತನಾಡಿದ್ದಾರೆ.
ವಿವೇಕ ಸಂಪದ ಓದುಗರು, ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9964282370, 8762673146 ಸಂಪರ್ಕಿಸಬಹುದು.

spot_img

More articles

LEAVE A REPLY

Please enter your comment!
Please enter your name here