Tuesday, June 2, 2026

ಉಡುಪಿ: ನದಿ ತೀರದಲ್ಲಿ ಹಸುವಿನ ರುಂಡ ಪತ್ತೆ- ಹಿಂದೂ ಸಂಘಟನೆಗಳ ಆಕ್ರೋಶ

Must read

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಟ್ಟು ಪ್ರದೇಶದಲ್ಲಿ ನದಿ ತೀರದಲ್ಲಿ ಹಸುವಿನ ರುಂಡ ಪತ್ತೆಯಾಗಿದೆ.
ಕಲ್ಲಟ್ಟು ಸಮೀಪದ ನದಿ ತೀರದ ನಿರ್ಜನ ಪ್ರದೇಶದಲ್ಲಿ ಹಸುವಿನ ರುಂಡ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸರದ ಅನೇಕ ದೇವಾಲಯಗಳ ಪುಣ್ಯ ಸ್ನಾನ ನಡೆಯುವ ಈ ನದಿ ಭಾಗವು “ಪಾಪನಾಶಿನಿ ನದಿ” ಎಂದೇ ಪ್ರಸಿದ್ಧವಾಗಿದ್ದು, ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ ಹಲವು ದೇಗುಲಗಳ ಜಳಕ ಕಾರ್ಯಕ್ರಮಗಳು ಇದೇ ಪ್ರದೇಶದಲ್ಲಿ ನಡೆಯುತ್ತವೆ.
ನಿರ್ಜನ ಪ್ರದೇಶವನ್ನು ಗಮನಿಸಿಕೊಂಡು ದುಷ್ಕರ್ಮಿಗಳು ಹಸುವಿನ ತ್ಯಾಜ್ಯವನ್ನು ಇಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಮತ್ತು ಕಾರ್ಯಕರ್ತರು ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರಕರಣದ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

spot_img

More articles

LEAVE A REPLY

Please enter your comment!
Please enter your name here