Thursday, May 21, 2026

ಕೊಡವೂರಿನಲ್ಲಿ ಮಹಾರುದ್ರಯಾಗ ವೈಭವ: ಅನ್ನಸಂತರ್ಪಣೆಗೆ ಹರಿದುಬಂದ ಭಕ್ತಸಾಗರ

Must read

ಉಡುಪಿ: ಕೊಡವೂರುದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಾಗಿರುವ ಮಹಾರುದ್ರಯಾಗದ ಕೊನೆಯ ದಿನವಾದ ಮಂಗಳವಾರ ದೇವಸ್ಥಾನ ಪರಿಸರ ಭಕ್ತಸಾಗರಕ್ಕೆ ಸಾಕ್ಷಿಯಾಯಿತು. ಬೆಳಗ್ಗಿನಿಂದಲೇ ಜಿಲ್ಲೆಯ ವಿವಿಧ ಭಾಗಗಳೊಂದಿಗೆ ಹೊರ ಜಿಲ್ಲೆಗಳ ಭಕ್ತರೂ ದೇವಸ್ಥಾನಕ್ಕೆ ಆಗಮಿಸಿ ಯಾಗ, ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಭಾವದಿಂದ ಪಾಲ್ಗೊಂಡರು.
ಮಹಾರುದ್ರಯಾಗದ ಪೂರ್ಣಾಹುತಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಪಾರಾಯಣ, ಹೋಮ ಹಾಗೂ ಮಂಗಳಾರತಿ ನೆರವೇರಿತು. ಯಾಗಶಾಲೆಯ ಸುತ್ತಮುತ್ತ ವೇದಘೋಷ ಮೊಳಗುತ್ತಿದ್ದರೆ, ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ದೇವಸ್ಥಾನದ ಆವರಣ, ಪ್ರಮುಖ ಬೀದಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ಅನ್ನಸಂತರ್ಪಣೆಗೆ ಹರಿದುಬಂದ ಭಕ್ತ ಸಾಗರ:

ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಭೋಜನ ಸ್ವೀಕರಿಸಿದರು. ಬೆಳಗ್ಗಿನಿಂದಲೇ ಅನ್ನದಾನ ಮಂಟಪದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದ್ದು, ಸೇವಾ ಕಾರ್ಯಕರ್ತರು ಭಕ್ತರಿಗೆ ವ್ಯವಸ್ಥಿತವಾಗಿ ಊಟ ವಿತರಿಸಿದರು. ವಿಶೇಷವಾಗಿ ಕೊನೆಯ ದಿನದ ಅನ್ನಸಂತರ್ಪಣೆಯಲ್ಲಿ ಉಪ್ಪಿನಕಾಯಿ, ಕೊಸಂಬರಿ, ಮಜ್ಜಿಗೆ, ಹಲಸಿನ ಕಾಯಿಯ ಪಲ್ಯ, ಸಾಂಬಾರು, ಮಡ್ಡಿ, ಪಂಚರತ್ನ, ವಡೆ ಹಾಗೂ ಪಾಯಸವನ್ನು ಭಕ್ತರಿಗೆ ಉಣಬಡಿಸಲಾಯಿತು.

spot_img

More articles

LEAVE A REPLY

Please enter your comment!
Please enter your name here