ಉಡುಪಿ: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಎರಡನೇ ವರ್ಷಾಚರಣೆಯ ಅಂಗವಾಗಿ ಹಾಗೂ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂದಿರ ಟ್ರಸ್ಟ್ ನ ವಿಶ್ವಸ್ಥರಾದ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಇಂದಿನಿಂದ 5 ದಿನಗಳ ಕಾಲ ವಿಶೇಷ ಉತ್ಸವ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಉಡುಪಿಯಿಂದ ಆಗಮಿಸಿರುವ ವೈದಿಕರಿಂದ ತತ್ವ ಹೋಮ, ಸುದರ್ಶನ ಯಾಗ, ಶ್ರೀಗಳಿಂದ ತತ್ವ ಕಲಶಾರಾಧನೆ, ರಾಮದೇವರಿಗೆ ತತ್ವ ಕಲಶಾಭಿಷೇಕ ಸಹಿತ ಪೂಜೆ ಮಂಗಳಾರತಿ ನೆರವೇರಿತು. ಸಂಜೆ ಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ ಅಷ್ಟಾವಧಾನ ಸೇವೆಗಳು ನಡೆದವು.

