ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತ ಆದರ್ಶಗಳ ಬುನಾದಿಯಲ್ಲಿ ಸಹಕಾರ ಭಾರತಿ ಸ್ಥಾಪಿತವಾಗಿದ್ದು ದೇಶಾದ್ಯಂತ ಕಾರ್ಯಾಚರಿಸುತ್ತಿದೆ. ರಾಷ್ಟ್ರೀಯತೆಯ ಸಿದ್ಧಾಂತ ಮತ್ತು ಆದರ್ಶದ ನೆಲೆಗಟ್ಟಿನಲ್ಲಿ ಮತ್ತು ಭಾರತೀಯ ಸಂಸ್ಕೃತಿ ಆಧಾರದಲ್ಲಿ ದೇಶದ ಕಟ್ಟಕಡೆಯ ಪ್ರಜೆಯನ್ನು ತಲುಪುವಂತೆ ಸಹಕಾರ ಭಾರತಿಯನ್ನು ಅಭಿವೃದ್ದಿ ಪಡಿಸೊಣ ಎಂದು ಜಿಲ್ಲಾ ಸಹಕಾರ ಭಾರತಿಯ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಅತ್ರಾಡಿಯವರು ಕರೆ ನೀಡಿದರು.
ಉಡುಪಿ ತಾಲೂಕು ಸಹಕಾರ ಭಾರತಿ ಇದರ ಅಧ್ಯಕ್ಷರಾದ ಪಾಂಡುರಂಗ ಎಳ್ಳಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಇದರ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ, ರಾಜ್ಯ ಮಹಿಳಾ ಪ್ರಮುಖರಾದ ವಿದ್ಯಾ ಪೈ, ಉಡುಪಿ ತಾಲೂಕು ಮಹಿಳಾ ಸಂಘಟನಾ ಪ್ರಮುಖರಾದ ರೂಪ ನಾಯಕ್, ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಪರ್ಕಳ ಇದರ ಅಧ್ಯಕ್ಷರಾದ ಬಿ ಎಚ್ ಶೆಟ್ಟಿಗಾರ್, ಸಂಗಮ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದರ ಉಪಾಧ್ಯಕ್ಷರಾದ ಜ್ಯೋತಿ ಕೃಷ್ಣಮೂರ್ತಿ ವಿಜೇತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಹಕಾರ ಭಾರತಿ ಪರಿಚಯ ಮತ್ತು ದೈಯೋದ್ದೇಶ, ಸಹಕಾರಿ ಸಂಘಟನೆ ಹಾಗೂ ನಿರ್ದೇಶಕರ ಜವಾಬ್ದಾರಿ, ಕರ್ತವ್ಯ ಈ ವಿಷಯದ ಬಗ್ಗೆ ಸಹಕಾರ ಭಾರತಿ ಮೈಸೂರು ವಿಭಾಗ ಸಂಘಟನಾ ಪ್ರಮುಖರಾದ ಕುಂಬಳೇಕರ್ ಮೋಹನ್ ಕುಮಾರ್ ರವರು ಮತ್ತು ಕಾರ್ಯಕರ್ತ, ಕಾರ್ಯ ಪದ್ಧತಿ, ಪಂಚ ಪರಿವರ್ತನೆ, ಸಂಘಟನೆ ಈ ವಿಷಯದ ಬಗ್ಗೆ ಮಂಗಳೂರು ವಿಭಾಗ ಕಾಲೇಜು ವಿದ್ಯಾರ್ಥಿ ಪ್ರಮುಖರಾದ ರೋಹಿತ್ ಪುತ್ತೂರ್ ರವರು
ಕಾರ್ಯಗಾರ ನಡೆಸಿದರು.
ಸಮಾರೋಪ ಸಮಾರಂಭ ದಲ್ಲಿ ಹೆರ್ಗ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಗಳಾದ ಸುದೇಶ್ ನಾಯಕ್, ಉಡುಪಿ ನೇಕಾರರ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿ ರವರು ಮಾತನಾಡಿದರು.
ಉಡುಪಿ ಗ್ಯಾರೇಜು ಮಾಲೀಕರ ಮತ್ತು ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಮಂಜುನಾಥ್ ಮಣಿಪಾಲ್ ಸ್ವಾಗತಿಸಿದರು. ಹಾಲು ಉತ್ಪಾದಕರ ಸಂಘದ ರತ್ನಾಕರ ಶೆಟ್ಟಿ ಆತ್ರಾಡಿ ವಂದಿಸಿದರು. ಕನ್ಸುಮರ್ ಸೊಸೈಯಿಟಿ ಇದರ ನಿರ್ದೇಶಕರಾದ ಪ್ರೀತಿ ಕಾಮತ್ ಪ್ರಾರ್ಥಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಡಾ. ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.

