ಉಡುಪಿ: ಆಧಾರಸ್ಥಂಬ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಸಣ್ಣ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಮೂಡುಬೆಳ್ಳೆಯ ನೆಲ್ಲಿಕಟ್ಟೆಯ ನಿವಾಸಿ ಸುಗಂಧಿ ಅವರಿಗೆ ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್ ನೇತೃತ್ವದಲ್ಲಿ “ಸಮಾನ ಮನಸ್ಕರ ತಂಡ ಉಡುಪಿ” ಇವರು ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಲಾಯಿತು.
ಮನೆಯ ಕೀಲಿ ಕೈ ಹಸ್ತಾಂತರಿಸಿ ಮಾತನಾಡಿದ ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್ ಅವರು, ಸಮಾಜದಲ್ಲಿರುವ ಕಡುಬಡತನದ ಕುಟುಂಬವನ್ನು ಗುರುತಿಸಿ ಅವರಿಗೆ ಮನೆಯನ್ನು ನಿರ್ಮಿಸಿಕೊಡುವ ಕಾರ್ಯವನ್ನು ಸಮಾನ ಮನಸ್ಕರ ತಂಡ ಮಾಡಿಕೊಂಡು ಬರುತ್ತಿದೆ. ಕಳೆದ ಮೂರುವರೆ ವರ್ಷಗಳಿಂದ ಈ ಸಾಮಾಜಿಕ ಕಾರ್ಯವನ್ನು ನಮ್ಮ ತಂಡ ಮಾಡುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 35 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದೇವೆ. ಕಡುಬಡತನದಲ್ಲಿ ಬದುಕು ಸಾಗಿಸುತ್ತಿರುವ ಕುಟುಂಬವನ್ನು ಆಯ್ಕೆ ಮಾಡಿಕೊಂಡು ಅವರಿಗೆ ನಮ್ಮ ತಂಡದ ದಾನಿಗಳ ಸಹಕಾರದೊಂದಿಗೆ ಮನೆ ಕಟ್ಟಿಸಿಕೊಡುತ್ತಿದ್ದೇವೆ ಎಂದರು.
S.K.ಗೋಲ್ಡ್ ಸ್ಮಿತ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಮಾತನಾಡಿ, ಸರಕಾರ ಮಾಡುವ ಕಾರ್ಯವನ್ನು ಸಮಾನ ಮನಸ್ಕರ ತಂಡ ಮಾಡುತ್ತಿದೆ. ಇದು ದೇಶದಲ್ಲಿಯೇ ಮಾದರಿಯಾದ ಕಾರ್ಯ. ಮೂರವರೆ ವರ್ಷದಲ್ಲಿ 35 ಮನೆಗಳನ್ನು ಕಟ್ಟಿಕೊಡುವುದು ಸಾಮಾನ್ಯವಾದ ವಿಷಯವಲ್ಲ ಎಂದರು. ಸಮಾಜಕ್ಕೆ ಏನಾದರೂ ಸಹಾಯಹಸ್ತ ಚಾಚಬೇಕೆಂಬ ಮನಸ್ಸು ಉಳ್ಳವರು ಸೇರಿಕೊಂಡು ಕಟ್ಟಿದ ಸಂಸ್ಥೆ ಸಮಾನ ಮನಸ್ಕರ ತಂಡ. ದುಡಿಯುವ ಗಂಡನ ಆಧಾರ ಇಲ್ಲದ ಕುಟುಂಬ ಅಥವಾ ಕೇವಲ ಮಕ್ಕಳಿರುವ ಕುಟುಂಬವನ್ನು ಮಾನದಂಡವಾಗಿ ಪರಿಗಣಿಸಿ, ಅಂತಹ ಕುಟುಂಬಕ್ಕೆ ಮನೆ ಕಟ್ಟಿ ಕೊಡುತ್ತಿದ್ದೇವೆ. ಆ ಕುಟುಂಬಕ್ಕೆ ಸ್ವಂತ ಜಾಗ ಇರಬೇಕು. ನಮ್ಮ ತಂಡದ ಸದಸ್ಯರೊಬ್ಬರು ಅಂತಹ ಕುಟುಂಬವನ್ನು ಸೂಚಿಸಬೇಕು. ಈ ರೀತಿಯ ಮಾನದಂಡವನ್ನು ನಾವು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಪುತ್ತೂರು ಶಿಲ್ಪಿ ಮಾಧವ ಆಚಾರ್ಯ ಮಾರ್ಗದರ್ಶನ, ನಾಗೇಶ್ ಆಚಾರ್ಯ ನೆಲ್ಲಿಕಟ್ಟೆ, ಶೇಖರ ಆಚಾರ್ಯ ಕುಕ್ಕೆಹಳ್ಳಿ, ಸುಮಿತ್ರ ಮತ್ತು ನರಸಿಂಹ ಆಚಾರ್ಯ ಬೆಳ್ಳಂಪಳ್ಳಿ, ವೈ. ಎ. ಬಾಳ್ಳಟ್ಟ ಮೊದಲಾದವರ ನಿರ್ವಹಣೆಯಲ್ಲಿ ಈ ಮನೆಯನ್ನು ನಿರ್ಮಿಸಲಾಗಿತ್ತು.
ಮಣಿಪಾಲದ ನಿವೃತ್ತ ಪ್ರಾಧ್ಯಾಪಕ ಬಿ.ಎ. ಆಚಾರ್ಯ, ರಾಜೇಶ್ವರ ಆಚಾರ್ಯ ಐಶ್ವರ್ಯ ಜ್ಯುವಲ್ಲರಿ ವರ್ಕ್, ಆತ್ರಾಡಿ, ಶ್ರೀಮತಿ ಉಷಾ ಜಿ. ಟಿ. ಆಚಾರ್ಯ ಮುಲ್ಕಿ, ಶ್ರೀಮತಿ ಮಾಲತಿ ಭಾಸ್ಕರ ಆಚಾರ್ಯ ಮಾಜಿ ಅಧ್ಯಕ್ಷರು ಹಿರಿಯಡ್ಕ ಗ್ರಾಮ ಪಂಚಾಯತ್, ಶ್ರೀ ಸತೀಶ್ ಆಚಾರ್ಯ ಬೇಳೂರು, ಶ್ರೀ ಭಾಸ್ಕರ ಆಚಾರ್ಯ ನಿವೃತ್ತ ಪ್ರಾಧ್ಯಾಪಕರು, ಚೊಕ್ಕಾಡಿ, ಶ್ರೀಯುತ ಕಿರಣ್ ಉಡುಪಿ ಮತ್ತು ಶ್ರೀ ಶ್ರೀಶ ಆಚಾರ್ಯ ಗುಂಡಿಬೈಲು ಅಧ್ಯಕ್ಷರು ಯೂತ್ ಅಫ್ ವಿಶ್ವಕರ್ಮ (ರಿ.) ಉಡುಪಿ, ಶ್ರೀ ವೆಂಕಟೇಶ ಆಚಾರ್ಯ ಅಧ್ಯಕ್ಷರು ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಉಡುಪಿ, ಶ್ರೀ ರಾಘವೇಂದ್ರ ಆಚಾರ್ಯ, ಸಿವಿಲ್ ಇಂಜಿನಿಯರ್, ಕೋಟ ಶ್ರೀ ಶ್ರೀನಿವಾಸ್ ರಾವ್ ಪ್ರಾಧ್ಯಾಪಕರು ಕಾರ್ಕಳ ಉಪಸ್ಥಿತರಿದ್ದು ತಂಡದ ಸದಸ್ಯರನ್ನು ಅಭಿನಂದಿಸಿ ಶುಭ ಹಾರೈಸಿದರು.
ಸಹಾಯವನ್ನು ಶ್ಲಾಘಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಮನೆಯವರು ಶ್ರೀ ಶಶಿಧರ ಪುರೋಹಿತರಿಗೆ ಶಾಲು ಹೊದಿಸಿ, ಹೂ ಹಣ್ಣು ನೀಡಿ ಗೌರವಿಸಿದರು
ಸುಜಯ ಮತ್ತು ಸುಜನ್ಯ ಪ್ರಾರ್ಥಸಿದರು. ವೆಂಕಟೇಶ ಆಚಾರ್ಯ ಸ್ವಾಗತಿಸಿದರು.
ಉಡುಪಿ: ಸಮಾನ ಮನಸ್ಕ ತಂಡದಿಂದ 35ನೇ ಮನೆ ಹಸ್ತಾಂತರ
More articles

