Tuesday, January 13, 2026

ಡಿ.6-7ರಂದು ಮಾರ್ಪಳ್ಳಿ ಶಾರದಾ ನೃತ್ಯಾಲಯದ ರಜತ ಮಹೋತ್ಸವ

Must read

ಉಡುಪಿ: ಶಾರದಾ ನೃತ್ಯಾಲಯ ಮಾರ್ಪಳ್ಳಿ ಇದರ ರಜತ ಮಹೋತ್ಸವ ಕಾರ್ಯಕ್ರಮ ಡಿ. 6 ಮತ್ತು 7ರಂದು ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನೃತ್ಯ ಮತ್ತು ಸಂಗೀತ ನಿರ್ದೇಶಕಿ ವಿದುಷಿ ಪಾವನ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿ.6ರಂದು ಸಂಜೆ 4.45ಕ್ಕೆ ಮೈಸೂರು ವಸುಂಧರಾ ಪ್ರದರ್ಶನ ಕಲೆಗಳ ಕೇಂದ್ರದ ನಿರ್ದೇಶಕ ಡಾ. ವಸುಂಧರಾ ದೊರೆಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿದುಷಿ ಯಶೋದ ಆಚಾರ್ಯ, ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ, ವಿದುಷಿ ವಾರಿಜಾಕ್ಷಿ ಎಲ್. ಭಟ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಂಜೆ 6ಗಂಟೆಗೆ ಸಂಸ್ಥೆಯ ವಿದ್ಯಾರ್ಥಿಗಳು‌ ಹಾಗೂ ಹಳೆ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಡಿ. 7ರಂದು ಸಂಜೆ 4.30ಕ್ಕೆ ಎರಡನೇ ದಿನದ ನೃತ್ಯೋಲ್ಲಾಸ ಕಾರ್ಯಕ್ರಮವನ್ನು ಹಿರಿಯ ನೃತ್ಯ ಗುರು ಪ್ರತಿಭಾ ಎಲ್. ಸಾಮಗ ಉದ್ಘಾಟಿಸಲಿದ್ದಾರೆ. ಸಂಜೆ 4.45ಕ್ಕೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಸಭಾಕಾರ್ಯಕ್ರಮ ಜರುಗಲಿದೆ. ಸಂಜೆ 7ಗಂಟೆಗೆ ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ‘ಅಮ್ಮ” ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು‌.
ಸುದ್ದಿಗೋಷ್ಠಿಯಲ್ಲಿ ದೀಪಾಶ್ರೀ, ಶರಣ್ಯ ನಾಯಕ್, ತೇಜಸ್ವಿ, ಅನಿಲ್ ಇದ್ದರು.

spot_img

More articles

LEAVE A REPLY

Please enter your comment!
Please enter your name here