ರಿಯಾದ್: ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ 2026ರ ಈದ್ ಉಲ್ ಫಿತ್ರ್ ಹಬ್ಬವನ್ನು ಮಾ.20ರಂದು ಶುಕ್ರವಾರ ಆಚರಿಸಲಾಗುತ್ತದೆ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿದೆ.
ಚಂದ್ರ ವೀಕ್ಷಣೆ ಸಮಿತಿಯು ಮಾ.18ರಂದು ಸಭೆ ಸೇರಿ ಚಂದ್ರ ದರ್ಶನದ ಬಗ್ಗೆ ಪರಿಶೀಲನೆ ನಡೆಸಿತು. ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಮಝಾನ್ ತಿಂಗಳು 30 ದಿನಗಳನ್ನು ಪೂರ್ಣಗೊಳಿಸಲಿದ್ದು, ಅದರ ಬಳಿಕದ ದಿನವಾದ ಮಾ.20ರಂದು ಶುಕ್ರವಾರ ಈದ್ ಉಲ್ ಫಿತ್ರ್ ಹಬ್ಬದ ಆಚರಣೆ ನಡೆಯಲಿದೆ.
ಸೌದಿ ಅರೇಬಿಯಾದಲ್ಲಿ ಮಾ.20ಕ್ಕೆ ಈದ್ ಉಲ್ ಫಿತ್ರ್
More articles

