Wednesday, March 25, 2026

ಮಣಿಪಾಲ: ಬೆಂಕಿಗಾಹುತಿಯಾದ ಶಾಲಾ ಬಸ್: ತಪ್ಪಿದ ಭಾರೀ ದುರಂತ!

Must read

ಉಡುಪಿ: ಒಣ ಹುಲ್ಲಿಗೆ ಇಟ್ಟ ಬೆಂಕಿಗೆ ಶಾಲಾ ಬಸ್ ವೊಂದು ಸುಟ್ಟು ಹೋದ ಘಟನೆ ಮಣಿಪಾಲ ಅಲೆವೂರು ಪ್ರಗತಿ ನಗರದ ಕೇಂದ್ರೀಯ ವಿದ್ಯಾಲಯ ಪರಿಸರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಅಲೆವೂರು ಪ್ರಗತಿ ನಗರ ಪರಿಸರದಲ್ಲಿ ಒಣ ಹುಲ್ಲಿಗೆ ತಗಲಿದ ಬೆಂಕಿ ಪರಿಸರವಿಡಿ ವ್ಯಾಪಿಸಿದೆ. ಅಲ್ಲೇ ಸಮೀಪ ನಿಲ್ಲಿಸಿದ್ದ ಖಾಸಗಿ ಶಾಲಾ ಬಸ್ ಬೆಂಕಿಗಾಹುತಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಷ್ಟೊತ್ತಿಗೆ ಬಸ್ ಸುಟ್ಟು ಕರಕಲಾಗಿತ್ತು. 15 ವರ್ಷಗಳಾಗಿದ್ದ ಹಿನ್ನೆಲೆಯಲ್ಲಿ ಬಸ್ ಅನ್ನು ಕೆಲವು ತಿಂಗಳ ಹಿಂದೆ ಅಲ್ಲೇ ನಿಲ್ಲಿಸಲಾಗಿತ್ತು. ಹುಲ್ಲು ಬೆಳೆದುಕೊಂಡಿದ್ದರಿಂದ ಬೆಂಕಿ ಹತ್ತಿಕೊಂಡು ಬಸ್ ಸುಟ್ಟುಹೋಗಿದೆ ಎನ್ನಲಾಗಿದೆ. ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

spot_img

More articles

LEAVE A REPLY

Please enter your comment!
Please enter your name here