Wednesday, March 25, 2026

ಕುಂದಾಪುರ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

Must read

ಉಡುಪಿ: ಜಡ್ಕಲ್ ಗ್ರಾಮದ ಹಯ್ಯಂಗಾರು ಹೊಳೆಗೆ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ಯುವಕನನ್ನು ಗೋಳಿಹೊಳೆ ಗ್ರಾಮದ ಅರೆಶಿರೂರು ನಿವಾಸಿ ರಿಕ್ಷಾ ಚಾಲಕ ಸಂದೀಪ್ ನಾಯ್ಕ (32) ಎಂದು ಗುರುತಿಸಲಾಗಿದೆ.
ಗೋಳಿಹೊಳೆಯ ಹೊಟೇಲ್ ಉದ್ಯಮಿ ಬಾಬಣ್ಣ ಅವರ ಪುತ್ರರಾಗಿರುವ ಸಂದೀಪ್ ಅವರು ಮಾ.22ರಂದು ಸ್ನೇಹಿತರೊಂದಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತರು ಅವಿವಾಹಿತರಾಗಿದ್ದು, ತಂದೆ-ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

spot_img

More articles

LEAVE A REPLY

Please enter your comment!
Please enter your name here