Friday, March 27, 2026

ಕಾಪು: ತಮಿಳುನಾಡಿನ ದೋಣಿ ಡಿಕ್ಕಿ- ಸ್ಥಳೀಯ ನಾಡದೋಣಿ ಮಗುಚಿ ಮೀನುಗಾರ ನಾಪತ್ತೆ !

Must read

ಉಡುಪಿ: ಕಾಪು ಕಡಲ ಕಿನಾರೆಯಲ್ಲಿ ಅಕ್ರಮ ಪಾಚ್ಚಾಲೆ (ಅಜಿರ್ ) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರ ದೋಣಿ ಗುದ್ದಿದ ಪರಿಣಾಮ ಸ್ಥಳೀಯ ಮೀನುಗಾರ ದೋಣಿ ಮಗುಚಿ ಇಬ್ಬರು ಮೀನುಗಾರು ನೀರಿಗೆ ಬಿದ್ದು ಒಬ್ಬನನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೀನುಗಾರ ನಾಪತ್ತೆಯಾದ ಘಟನೆ ಸಂಭವಿಸಿದೆ.
ಕಳೆದ ಕೆಲವು ದಿನಗಳಿಂದ ತಮಿಳುನಾಡು ಮೂಲದ ಮೀನುಗಾರರು ಅಕ್ರಮ ಅಜ್ಜಿರ್ ಮೀನುಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಸಣ್ಣ ದೋಣಿಯಲ್ಲಿ ತೆರಳಿ ತಮಿಳುನಾಡು ಮೂಲದ ಮೀನುಗಾರರ ಜೊತೆ ಮೀನುಗಾರಿಕೆ ಮಾಡದಂತೆ ಮನವಿ ಮಾಡಲು ಮುಂದಾಗಿದ್ದರು.ಈ ವೇಳೆ ತಮಿಳುನಾಡಿನ ದೊಡ್ಡ ದೋಣಿಯನ್ನು ಸ್ಥಳೀಯ ಮೀನುಗಾರರ ಸಣ್ಣ ದೋಣಿಗೆ ಉದ್ದೇಶಪೂರ್ವಕ ಡಿಕ್ಕಿ ಹೊಡೆಸಿದ್ದಾರೆ.ಈ ವೇಳೆ ಕಾಪು ಮೂಲದ ದೋಣಿ ಮಗುಚಿ ಬಿದ್ದು ಇಬ್ಬರು ಮೀನುಗರಾರು ನೀರಿಗೆ ಬಿದ್ದಿದ್ದು ಒಬ್ಬನನ್ನು ರಕ್ಷಿಸಲಾಗಿದ್ದು ಇನ್ನೊಬ್ಬ ಮೀನುಗಾರ ನಾಪತ್ತೆ ಯಾಗಿದ್ದಾನೆ.ಘಟನೆ ಬಳಿಕ ತಮಿಳುನಾಡು ಮೂಲದ ಮೀನುಗಾರರು ಮಲ್ಪೆಯತ್ತ ಪಲಾಯನ ಮಾಡಿದ್ದಾಗಿ ಸ್ಥಳೀಯರು ದೂರಿದ್ದಾರೆ.

spot_img

More articles

LEAVE A REPLY

Please enter your comment!
Please enter your name here