Friday, January 9, 2026

ಉಡುಪಿ: ಚಿನ್ನದ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಗಟ್ಟಿ ಕಳ್ಳತನ: ಐದು ಮಂದಿ ಅಂತರ್‌ ರಾಜ್ಯ ಕಳ್ಳರ ಬಂಧನ

Must read

ಉಡುಪಿ: ಉಡುಪಿ ನಗರದ ವಾದಿರಾಜ ಮಾರ್ಗದಲ್ಲಿರುವ ಜ್ಯುವೆಲ್ಲರಿ ವರ್ಕ್ ಶಾಪ್ ನ ಶಟರ್ ಹಾಕಿದ್ದ ಬೀಗವನ್ನು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಅಂತರ್ ರಾಜ್ಯ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ನಿವಾಸಿಗಳಾದ ಶುಭಂ ತಾನಾಜಿ ಸಾಥೆ(25), ಪ್ರವೀಣ ಅಪ್ಪ ಸಾಥೆ (23), ನಿಲೇಶ ಬಾಪು ಕಸ್ತೂರಿ(19), ಸಾಗರ ದತ್ತಾತ್ರೇಯ ಕಂಡಗಾಲೆ(32) ಹಾಗೂ ಬಾಗವ ರೋಹಿತ್‌ ಶ್ರೀಮಂತ್‌(25) ಬಂಧಿತ ಆರೋಪಿಗಳು. ಸೆ.12ರಂದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ನಿಮ್‌ಗಾಂವ್‌ ಎಂಬಲ್ಲಿ ಕಳ್ಳರನ್ನು ಬಂಧಿಸಿದ ಪೊಲೀಸರು, 748.8 ಗ್ರಾಂ ಚಿನ್ನ ಅಂದಾಜು ಮೌಲ್ಯ ರೂ 74,88,000, 4 ಕೆಜಿ 445 ಗ್ರಾಂ ಬೆಳ್ಳಿ ಅಂದಾಜು ಮೌಲ್ಯ 3,60,000, ನಗದು ಹಣ 5,00,000 ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಕಾರು ಅಂದಾಜು ಮೌಲ್ಯ 4,00,000 ಸೇರಿ ಒಟ್ಟು ರೂ 87,48,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಕಳ್ಳರು ಸೆ. 8ರಂದು ರಾತ್ರಿ ಚಿನ್ನದ ಅಂಗಡಿಯ ರಿಫೈನರಿ ಮಷಿನ್‌ ನಲ್ಲಿ ಇಟ್ಟಿದ್ದ ಸುಮಾರು 95,71,000/- ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆ ಪ್ರಕರಣ ದಾಖಲಾಗಿತ್ತು.
ಉಡುಪಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಮಂಜುನಾಥ್‌ ವಿ.ಬಡಿಗೇರ. ನೇತೃತ್ವದಲ್ಲಿ ಪಿಎಸ್‌ಐ ಭರತೇಶ ಕಂಕಣವಾಡಿ, ಕಾಫು ಠಾಣಾ ಪಿಎಸ್‌ಐ ತೇಜಸ್ವಿ ಟಿ.ಐ ಕೊಲ್ಲೂರು ಠಾಣಾ ಪಿಎಸ್‌ಐ ವಿನಯಕುಮಾರ್‌ ಕೆ. ಸಿಬ್ಬಂದಿಯವರಾದ ಹರೀಶ್‌ ಎಎಸ್‌ಐ, ಜೀವನ್‌ ಕುಮಾರ್‌, ಪ್ರಸನ್ನ ಕುಮಾರ್‌, ಸಂತೋಷ್‌ ಶೆಟ್ಟಿ, ಸಂತೋಷ್‌ ರಾಥೋಡ್‌, ಶಿವಕುಮಾರ್, ಹೇಮಂತ್‌ಕುಮಾರ್‌ ಎಂ.ಆರ್, ಸುನೀಲ್‌ ರಾಥೋಡ್‌, ಮಣಿಪಾಲ್‌ ಠಾಣಾ ರವಿರಾಜ್‌ ಕೊಲ್ಲೂರು ಠಾಣೆ ನಾಗೇಂದ್ರ ಹಾಗೂ ಮಹಾರಾಷ್ಟ್ರರಾಜ್ಯದ ಅಕ್ಲುಜ್‌ ಪೋಲೀಸ್‌ ಠಾಣಾ ಸಿಬ್ಬಂದಿಯವರಾದ ಎಸ್‌ ಆರ್‌ ಮಾದುಬಾವಿ, ವಿಬಿ ಘಾಟಗೆ, ವಿಎ ಸಾಟೆರವರ ತಂಡವು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

spot_img

More articles

LEAVE A REPLY

Please enter your comment!
Please enter your name here