Saturday, April 18, 2026

ಉಡುಪಿ ನಗರಸಭೆಯಲ್ಲಿ ಆಸ್ತಿ ತೆರಿಗೆ ವಂಚನೆ ಪ್ರಕರಣ: ಮಹಿಳೆ ಸಹಿತ ಇಬ್ಬರ ಬಂಧನ

Must read

ಉಡುಪಿ: ಉಡುಪಿ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಗರಸಭೆ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬನ್ನಂಜೆ ನಿವಾಸಿ ಶಾಲಿನಿ ಹಾಗೂ ಕುಕ್ಕಿಕಟ್ಟೆಯ ಗಣೇಶ್ ಎಂದು ಗುರುತಿಸಲಾಗಿದೆ.
ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿ ಕೊಂಡಿರುವ ಶಾಲಿನಿ ಎಂಬಾಕೆಗೆ ನೀಡಿದ್ದು, ಅದಕ್ಕೆ ಶಾಲಿನಿ ತೆರಿಗೆ ಸ್ವೀಕೃತಿ ಆದ ಬಗ್ಗೆ ಸ್ವೀಕೃತಿಯನ್ನು ನೀಡಿದ್ದರು.
ಇತ್ತೀಚೆಗೆ ಆನಂದ ಸುವರ್ಣ ಆಸ್ತಿ ತೆರಿಗೆ ಪೋರ್ಟಲ್‌ನಲ್ಲಿ ತೆರಿಗೆ ಪಾವತಿಯಾದ ಬಗ್ಗೆ ತಪಾಸಣೆ ನಡೆಸಿದಾಗ ತೆರಿಗೆ ಪಾವತಿ ಆಗದೇ ಪೆಂಡಿಂಗ್ ಇರುವ ಬಗ್ಗೆ ತಿಳಿದುಬಂತು. ಈ ವಿಚಾರವನ್ನು ಆನಂದ ಸುವರ್ಣ ಪೌರಾಯುಕ್ತರ ಗಮನಕ್ಕೆ ತಂದಿದ್ದು, ಅವರು ಕೂಡ ಪರಿಶೀಲಿಸಿದಾಗ ಪೆಂಡಿಂಗ್ ಇರುವುದು ಕಂಡುಬಂದಿದೆ.
ನಂತರ ಕಚೇರಿಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಶಾಲಿನಿ ಅವರನ್ನು ಕರೆದು ವಿಚಾರಿಸಿದಾಗ ಆಕೆ ತಪ್ಪು ಒಪ್ಪಿಕೊಂಡಿದ್ದು, 2026ರ ಫೆ.16ರಂದು ಆಕೆ ಆನಂದ ಸುವರ್ಣ ಅವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು 35,213ರೂ. ಭರಿಸಿದ್ದಳು. ಶಾಲಿನಿ, ಆನಂದ ಸುವರ್ಣ ನೀಡಿದ ತೆರಿಗೆ ಹಣವನ್ನು ಸರಕಾರಕ್ಕೆ ಕಟ್ಟದೇ ಚಲನ್‌ನಲ್ಲಿ ಯೂನಿಯನ್ ಬ್ಯಾಂಕ್‌ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಇನ್ನಿತರರೊಂದಿಗೆ ಸೇರಿ ಸರಕಾರಕ್ಕೆ ವಂಚನೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

spot_img

More articles

LEAVE A REPLY

Please enter your comment!
Please enter your name here