ಉಡುಪಿ: ಕಾರ್ಯಾಗಾರವು ವಾಣಿಜ್ಯ ವಿದ್ಯಾರ್ಥಿಗಳ ಆರ್ಥಿಕ ಮೂಲಭೂತ ಪರಿಕಲ್ಪನೆಗಳ ಬಗ್ಗೆ ಅರ್ಥಗರ್ಭಿತ ಬೋಧನೆ ನೀಡುವುದಲ್ಲದೆ, ಪರಿಣಾಮಕಾರಿ ಆರ್ಥಿಕ ನಿರ್ವಹಣೆಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುವಂತೆ ಆಯೋಜಿಸಲಾಗಿತ್ತು.
ಆರ್ಥಿಕ ಯೋಜನೆ ಮತ್ತು ನಿರ್ವಹಣೆಯಲ್ಲಿ ಪರಿಣಿತರಾದ ಶ್ರಿ. ಲಿಯೋ ಅಮಲ್ ಎ., ಹಿರಿಯ ಶಾಖಾ ವ್ಯವಸ್ಥಾಪಕರು, ಫ್ರಾಂಕ್ಲಿನ್ ಟೆಂಪಲ್ಟನ್, ಮಂಗಳೂರು, ಇವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಶ್ರಿ. ಲಿಯೋ ಅಮಲ್ ಎ. ರವರು ಆರ್ಥಿಕ ಯೋಜನೆಯ ಮೂಲಭೂತ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ಅವರು ಬಜೆಟಿಂಗ್ ಮತ್ತು ಉಳಿತಾಯದ ಮಹತ್ವ, ಹೂಡಿಕೆ ಯೋಜನೆಯ ಮೂಲಭಾಗಗಳು, ವೈಯಕ್ತಿಕ ಆರ್ಥಿಕತೆಯಲ್ಲಿ ಅಪಾಯ ನಿರ್ವಹಣೆ, ಹಾಗೂ ಸಿರಿ ಸಂಪತ್ತಿ ಸೃಷ್ಟಿಯಲ್ಲಿ ಆರ್ಥಿಕ ಶಿಸ್ತಿನ ಪಾತ್ರ ಎಂಬ ವಿಷಯಗಳನ್ನು ಸಮಗ್ರವಾಗಿ ವಿವರಿಸಿದರು.
ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆರ್ಥಿಕ ಜ್ಞಾನವನ್ನು ನೀಡುವಲ್ಲಿ ಕಾರ್ಯಗಾರವು ಮಹತ್ವದ ಹೆಜ್ಜೆಯಾಗಿದೆ. ಇದರಿಂದಾಗಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಆರ್ಥಿಕ ಯೋಜನೆಯ ಪ್ರಾಮುಖ್ಯತೆ ಮತ್ತಷ್ಟು ದೃಢಗೊಂಡಿತು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಅಧ್ಯಕ್ಷೆ ಡಾ. ಪ್ರೀತಿ ಕೀರ್ತಿ ಡಿಸೋಜಾ ರವರು ಅಧ್ಯಕ್ಷತೆ ವಹಿಸಿ ನುಡಿದರು.
ವಿದ್ಯಾರ್ಥಿಗಳು ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ಮತ್ತು ತಮ್ಮ ಪ್ರಶ್ನೆಗಳ ಮೂಲಕ ಹೆಚ್ಚಿನ ತಿಳುವಳಿಕೆ ಪಡೆದರು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆರ್ಥಿಕ ತಂತ್ರಗಳನ್ನು ಅರ್ಥಮಾಡಿಸಿಕೊಳ್ಳಲು ನೈಜ ಜೀವನದ ಉದಾಹರಣೆಗಳು ಮತ್ತು ಪ್ರಕರಣ ಅಧ್ಯಯನಗಳನ್ನು ಹಂಚಿಕೊಳ್ಳಲಾಯಿತು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ಸ್ಟಾಫ್ ಕೋ-ಆರ್ಡಿನೆೇಟರ್ ಶ್ರಿ. ಗುರುರಾಜ್ ಪಿ. ಮತ್ತು ಶ್ರೀಮತಿ ವೈಶಾಲಿ ಕೆ. ಉಪಸ್ಥಿತರಿದ್ದರು.