Wednesday, February 25, 2026

ಮಣಿಪಾಲ: ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಹೊಟೇಲ್ ಕಾರ್ಮಿಕನ ಹತ್ಯೆ

Must read

ಉಡುಪಿ: ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಹೊಟೇಲ್ ಕಾರ್ಮಿಕನನ್ನು ಕೊಲೆಗೈದ ಘಟನೆ ಮಣಿಪಾಲದ ಬ್ಯಾಕಸಿನ್ ರೆಸ್ಟೊರೆಂಟ್ ನ ಮುಂಭಾಗದ ಅನಂತ ಕಲ್ಯಾಣ ಮಾರ್ಗದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕೇರಳದ ಕಾಸರಗೋಡು ನಿವಾಸಿ ಶ್ರೀಧರ ನಾಯಕ್ (38) ಕೊಲೆಯಾದ ವ್ಯಕ್ತಿ. ಈತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರ ಕುಕ್ ಎಂದು ತಿಳಿದುಬಂದಿದೆ. ಬೆಳಿಗ್ಗೆ 6ಗಂಟೆ ಸುಮಾರಿಗೆ ಮೂರರಿಂದ ನಾಲ್ಕು ಮಂದಿಯ ತಂಡ ಹೊಡೆದಾಟ ನಡೆಸುತ್ತಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿದಾಗ ಶ್ರೀಧರ್ ಅವರ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಶ್ರೀಧರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕುಮಾರ್ , ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ , ಮಂಜುನಾಥ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here