Friday, October 18, 2024

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ಪಿಡಿಒ, ನೌಕರರಿಂದ ಮುಷ್ಕರ

Must read

ಉಡುಪಿ: ಅಕ್ಟೋಬರ್ 4 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಗ್ರಾಮ ಪಂಚಾಯಿತಿಗಳ ಸೇವೆಯನ್ನು ಸ್ಥಗಿತಗೊಳಿಸಿ ನಡೆಸುತ್ತಿರುವ ಮುಷ್ಕರ ಜಿಲ್ಲಾ ಕೇಂದ್ರಗಳಿಗೆ ಸ್ಥಳಾಂತರಗೊಂಡಿದೆ.

ಇಂದಿನಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಪಂ ಪಿಡಿಒ ಹಾಗೂ ಪಂಚಾಯತ್ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲ 155 ಗ್ರಾಮ ಪಂಚಾಯಿತಿಯ ನೌಕರರು ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಪಂಚಾಯತ್ ಗಳಲ್ಲಿ ಜನರ ಸೇವೆ ಸ್ಥಗಿತಗೊಂಡಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಯನ್ನು ನೀಡದೆ ಯಥಾ ಸ್ಥಿತಿಯನ್ನು ಮುಂದುವರಿಸಲಾಗಿದೆ. ಈ ಹೋರಾಟವು ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೆ ಅಥವಾ ರಾಜ್ಯ ಸಂಘದಿಂದ ಸೂಕ್ತ ನಿರ್ದೇಶನ ಬರುವವರೆಗೆ ಅನಿರ್ದಿಷ್ಟ ಅವಧಿಗೆ ಮುಂದುವರೆಯಲಿದೆ ಎಂದು ಸಂಘದ ಕಾರ್ಯದರ್ಶಿ ರಮೇಶ್ ನಾಯಕ್ ಹೇಳಿದ್ದಾರೆ.

ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಾಧ್ಯಕ್ಷ ಮಂಜುನಾಥ್ ಪಿ. ಶೆಟ್ಟಿ, ಪಂಚಾಯತ್‌ರಾಜ್ ಇಲಾಖೆ ವೃಂದ ಸಂಘ ಪದಾಧಿಕಾರಿಗಳಾದ ಅನಿಲ್ ಶೆಟ್ಟಿಿ, ಸಂತೋಷ್ ಜೋಗಿ, ಚಂದ್ರ ಬಿಲ್ಲವ, ತಿಲಕ್‌ರಾಜ್, ಗುರುಮೂರ್ತಿ, ರವೀಂದ್ರ ರಾವ್, ಆಶಾಲತಾ, ವಸಂತಿ, ರಮೇಶ್ ಕೆ. ನಾಯಕ್, ರುಕ್ಕನ ಗೌಡ, ಶಿವರಾಜು, ನಾಗೇಶ್ ಬಿ., ದಯಾನಂದ ಬೆನ್ನೂರು, ಪ್ರವೀಣ್ ಡಿ’ಸೋಜಾ, ಹರೀಶ್ಚಂದ್ರ ಆಚಾರ್ಯ, ಪ್ರಶಾಂತ್, ನಾರಾಯಣ ಬೀಜಾಡಿ, ಮಹೇಶ್ ಕೆ. ಸತೀಶ್ ಇದ್ದರು.

spot_img

More articles

LEAVE A REPLY

Please enter your comment!
Please enter your name here