Friday, November 15, 2024

ಅ.9ಕ್ಕೆ ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ

Must read

ಉಡುಪಿ: ಉತ್ತರ ಹಾಗೂ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್ ಪ್ರೈವೇಟ್ ಲಿಮಿಟೆಡ್‌ ನ ಎರಡನೇ ಶಾಖೆ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಇದೇ ಅ.9ಕ್ಕೆ ಉಡುಪಿಯ ಕಲ್ಸಂಕದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ದಿ ಓಷಿಯನ್ ಪರ್ಲ್ ಹೋಟೆಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ರೋಷನ್ ಬನಾನ್ ಹೇಳಿದರು.

ಉಡುಪಿ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೂತನ ಹೋಟೆಲ್ ನಲ್ಲಿ “ಗ್ಯಾಂಡ್ ದಿ ಪೆಸಿಫಿಕ್ 1 ಹಾಲ್” ಸುಮಾರು 2000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರಲ್ಲಿ ಮದುವೆಗಳು, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ಅದ್ಧೂರಿಯ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಿದೆ. ಹಾಗೆ, ‘ಪೆಸಿಫಿಕ್ 2’ ಹಾಲ್ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಇದು ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಪ್ರೆಸಿಡೆಂಟಲ್ ಸೂಟ್, ಕ್ಲಬ್ ಸೂಟ್ಸ್, ಫ್ಯಾಮಿಲಿ ಸೂಟ್ ಮತ್ತು ಡಿಲಕ್ಸ್ ರೂಮ್‌ಗಳು ಸಹಿತ ಒಟ್ಟು 67 ಐಷಾರಾಮಿ ಕೊಠಡಿಗಳು ಲಭ್ಯವಿದೆ ಎಂದರು.

ಜಿಮ್, ಫಿಟೈಸ್ ಸೆಂಟರ್, ಬಿಜಿನೆಸ್ ಲಾಂಜ್ ಸೌಲಭ್ಯಗಳು ಇಲ್ಲಿವೆ. ಈಜು ಪ್ರಿಯರಿಗೆ ಅನುಕೂಲಕ್ಕಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜು ಕೊಳವನ್ನು ಸಹ ನಿರ್ಮಾಣ ಮಾಡಲಾಗಿದೆ. ಗ್ರಾಹಕರ ವಾಸ್ತವ್ಯವು ಆರೋಗ್ಯದಾಯಕ, ಅನುಕೂಲಕರವಾಗಿರಬೇಕು ಎಂಬ ಉದ್ದೇಶದೊಂದಿಗೆ ರೂಮ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಈ ನೂತನ ಹೋಟೆಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನಿಸ್ ಆಹಾರ ಉತ್ಪನ್ನಗಳನ್ನು ಹೊಂದಿರುವ, ‘ಕೋರಲ್’ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾರ್ ಮತ್ತು ಜಾಸ್ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಇಲ್ಲಿನ ಮತ್ತೊಂದು ವಿಶೇಷ. ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್‌ನಲ್ಲಿ ಜನತೆಗೆ ವೈಭವದ, ಐಷಾರಾಮಿಯ ಮತ್ತು ಆಧುನಿಕತೆಯ ರಸ ಗಳಿಗೆಯನ್ನು ಅನುಭವಿಸುವ ಪ್ರಮುಖ ತಾಣವಾಗಲಿದೆ. ಜೊತೆಗೆ ವ್ಯಾಪಾರ ಮತ್ತು ಉತ್ತಮ ಮನರಂಜನೆಗಾಗಿ ಟೈಮ್ಸ್ ಸ್ಕ್ವೇರ್ ಮಾಲ್ ಇದ್ದು ವ್ಯಾಪಾರಸ್ಥರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಸಂಸ್ಥೆಯ ಸಾಗರ್ ಹಾಗೂ ಸ್ವಾಗತ ರೆಸ್ಟೋರೆಂಟ್‌ಗಳು ಈಗಾಗಲೇ ದೆಹಲಿ ಸಹಿತ ಉತ್ತರ ಭಾರತದಾದ್ಯಂತ ಜನಪ್ರಿಯಗೊಂಡಿವೆ. ಓಶಿಯನ್ ಪರ್ಲ್ ಹೋಟೆಲ್ ಮಂಗಳೂರು ಉಡುಪಿ, ಉಜಿರೆ, ಹುಬ್ಬಳ್ಳಿಗಳಲ್ಲಿ ಈಗಾಗಲೇ ಗ್ರಾಹಕರ ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.

ಟೈಮ್ಸ್ ಸ್ಕ್ವೇರ್ ಮಾಲ್ ನ ಮಾಲೀಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಓಷಿಯನ್ ಪರ್ಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಜಯರಾಮ್ ಬನಾನ್, ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಗಿರೀಶ್ ಪಿ.ವಿ, ಉಪಾಧ್ಯಕ್ಷ ಶಿವಕುಮಾರ್, ಜನರಲ್ ಮ್ಯಾನೇಜರ್ ಪ್ರಶಾಂತ್ ಆಚಾರ್ಯ, ಗ್ಲೆನ್ ಡಯಾಸ್, ಜೇಸನ್ ವಿನ್ಸೆಂಟ್ ಡಯಾಸ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here