Sunday, November 24, 2024

ಉಡುಪಿ: 23ನೇ ವರ್ಷದ ತುಳು ನಾಟಕ ಸ್ಪರ್ಧೆ; ತಂಡಗಳ ಆಹ್ವಾನ

Must read

ಉಡುಪಿ: ತುಳುಕೂಟ ಉಡುಪಿ ವತಿಯಿಂದ 23ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆ 2025ರ ಜನವರಿ ತಿಂಗಳ ಮೊದಲನೇ ವಾರದಿಂದ ಉಡುಪಿಯಲ್ಲಿ ಆಯೋಜಿಸಲಾಗಿದೆ.
ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ಗರಿಷ್ಠ ಏಳು ನಾಟಕಗಳನ್ನು ಆಯ್ಕೆ ಮಾಡಲಾಗುವುದು.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಕ್ರಮವಾಗಿ ರೂ. 20 ಸಾವಿರ, 15 ಸಾವಿರ ಹಾಗೂ 10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ 1 ಸಾವಿರ ಮತ್ತು ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5 ಸಾವಿರ ಹಾಗೂ ಹೊರರಾಜ್ಯದ ತಂಡಗಳಿಗೆ 10 ಸಾವಿರ ಭತ್ಯೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಒದಗಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಕ್ರಿಯಾಶೀಲ ತುಳು ಹವ್ಯಾಸಿ ರಂಗತಂಡಗಳು ಮುದ್ರಿತ ಪ್ರವೇಶಪತ್ರ ಮತ್ತು ನಿಯಮಾವಳಿಗಳ ಕುರಿತು ಬಿ. ಪ್ರಭಾಕರ ಭಂಡಾರಿ. ‘ಪ್ರಕೃತಿ’ 5-94A, 76ನೇ ಬಡಗುಬೆಟ್ಟು, ಬೈಲೂರು, ಉಡುಪಿ – 576101. ಮೊ. ಸಂ. 9880825626 ಇವರಿಗೆ ಬರೆಯಬೇಕು. ಪ್ರವೇಶ ಪತ್ರಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 03/11/2024 ಆಗಿರುತ್ತದೆ ಎಂದು ತುಳುಕೂಟದ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಸಂಚಾಲಕರಾದ ಪ್ರಭಾಕರ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here