Tuesday, September 17, 2024

ಉಡುಪಿ: ಎ.17ರಿಂದ ಮಕ್ಕಳ ‘ಬೇಸಿಗೆ ಶಿಬಿರ’

Must read

ಉಡುಪಿ: ಮಕ್ಕಳಲ್ಲಿ ಸನಾತನ ಸಂಸ್ಕಾರ ಹಾಗೂ ರಾಷ್ಟ್ರಭಕ್ತಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಲಾಜಿ ರಾಘವೇಂದ್ರ ಆಚಾರ್ಯ ಎಚ್ ಪಿ ಗ್ಯಾಸ್ ಆ್ಯಂಡ್ ಹೋಮ್ ಅಪ್ಲೈನ್ಸ್ ಪ್ರಾಯೋಜಕ್ವತದಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಇದೇ ಬರುವ ಎ.17ರಿಂದ 30ರ ವರೆಗೆ ಬೆಳಿಗ್ಗೆ 9ಗಂಟೆಯಿಂದ 11.30ರವರೆಗೆ ಕಡಿಯಾಳಿ ಶಾಲೆಯ ರೋಟರಿ ಹಾಲ್ ನಲ್ಲಿ ‘ಬೇಸಿಗೆ ಶಿಬಿರ’ವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಭಗವದ್ಗೀತೆ -15ನೇ ಅಧ್ಯಾಯ, ಕುಣಿತ ಭಜನೆ, ಕೃಷ್ಣನ ಬಾಲಲೀಲೆಯ ಕಥೆ ಮತ್ತು ಚಿತ್ರಕಲೆ, ಸೂರ್ಯ ನಮಸ್ಕಾರ ಮತ್ತು ಸರಳ ಯೋಗಾಸನ, ಮಹಾನ್ ರಾಷ್ಟ್ರಭಕ್ತರ ಜೀವನ ಕಥೆಗಳು, ನಿತ್ಯೋಪಯೋಗಿ ಉಪಯುಕ್ತ ಕೌಶಲ್ಯಗಳು, ದೈಹಿಕ ಮತ್ತು ಬೌದ್ಧಿಕ ಆಟಗಳು ಹಾಗೂ ಮಾತೃಭೂಮಿ ಪ್ರಾರ್ಥನೆ ಇವುಗಳ ಕುರಿತು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ.

ಶಿಬಿರವು ಸಂಪೂರ್ಣ ಉಚಿತವಾಗಿದೆ. ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಭಗವದ್ಗೀತೆ ಪುಸ್ತಕ, ಚಿತ್ರಪುಸ್ತಕ, ಕಲರ್ ಹಾಗೂ ಪ್ರತಿದಿನ ಸ್ನ್ಯಾಕ್ಸ್, ಜ್ಯೂಸ್ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಬಾಲಾಜಿ ವಿಷ್ಣು ಆಚಾರ್ಯ ಮೊಬೈಲ್ ಸಂಖ್ಯೆ 98809 02119 ಸಂಪರ್ಕಿಸಬಹುದು.

spot_img

More articles

LEAVE A REPLY

Please enter your comment!
Please enter your name here