ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಂದರ್ಭ ಕರಾವಳಿಯಿಂದ ಅಯೋಧ್ಯೆಗೆ ರೈಲು ಸಂಚಾರ ಪ್ರಾರಂಭಿಸಬೇಕು ಎಂಬ ಬೇಡಿಕೆಯನ್ನು ಕರಾವಳಿಯ ಜನರು ಸರಕಾರದ ಮುಂದಿಟ್ಟಿದ್ದಾರೆ.
ಕರಾವಳಿಯಿಂದ ಅತಿ ಹೆಚ್ಚು ಜನರು ಕರಸೇವಕರಾಗಿ ಅಯೋಧ್ಯೆ ಹೋರಾಟದಲ್ಲಿ ಭಾಗವಹಿಸಿದ್ದು ಇತಿಹಾಸ. ಅಲ್ಲದೆ, ಎಂಬತ್ತರ ದಶಕದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಧರ್ಮ ಸಂಸತ್ ಉಡುಪಿಯಲ್ಲಿ ನಡೆದು ಅಯೋಧ್ಯೆ ಹೋರಾಟಕ್ಕೆ ಚಾಲನೆ ನೀಡಲಾಗಿತ್ತು.
ಮುಂದೆ ಪೇಜಾವರ ಶ್ರೀಗಳು ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್ ನಲ್ಲಿ ಸೇರ್ಪಡೆಯಾದರು. ಈ ಎಲ್ಲ ಕಾರಣದಿಂದಾಗಿ ಕರಾವಳಿಯವರಿಗೊಂದು ಹಕ್ಕಿದೆ. ಕೇಂದ್ರ ಸರಕಾರ ಭಾರತದಾದ್ಯಂತ 100 ರೈಲುಗಳನ್ನು ಅಯೋಧ್ಯೆಗೆ ಪ್ರಾರಂಭಿಸಲಿದೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ನಾವು ಅಭಿಯಾನವನ್ನು ಆರಂಭಿಸಿದ್ದು, ಇದರ ಭಾಗವಾಗಿ ರೈಲ್ವೆ ಸಚಿವರು ಮತ್ತಿತರರಿಗೆ ಮನವಿ ಸಲ್ಲಿಸಿದ್ದೇವೆ ಎಂದು ರೈಲ್ವೆ ಹಿತರಕ್ಷಣಾ ಸಮಿತಿ ಮುಂದಾಳು ಪೃಥ್ವಿರಾಜ್ ಶೆಟ್ಟಿ ಹೇಳಿದ್ದಾರೆ.