Sunday, September 8, 2024

ಆನೆಗುಂದಿ ಮಠ: ಡಿ.25ರಿಂದ ಯಕ್ಷಗಾನ ತಾಳಮದ್ದಲೆ ಸಪ್ತಾಹ

Must read

ಉಡುಪಿ: ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಇದೇ ಬರುವ ಡಿಸೆಂಬರ್ 25ರಿಂದ 31ರ ವರೆಗೆ ತೃತೀಯ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ ನಡೆಯಲಿದೆ.


ಪಡುಕುತ್ಯಾರಿನ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಯಕ್ಷಗಾನ ಸಪ್ತಾಹ ಜರುಗಲಿದೆ. ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಸಪ್ತಾಹವನ್ನು ಆಯೋಜಿಸಲಾಗಿದೆ.


ಡಿ. 25 ರಂದು ಮಧ್ಯಾಹ್ನ 2.30ಕ್ಕೆ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ಆನೆಗುಂದಿ ಪ್ರತಿಷ್ಠಾನ ಮುಂಬಯಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಟಿ. ಆಚಾರ್ಯ ಮುಂಬೈ ದಿಕ್ಸೂಚಿ ಭಾಷಣ ಮಾಡುವರು. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಭಾಗವಹಿಸುವರು. ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ಕೆ. ಉಪಸ್ಥಿತರಿರುವರು.


ಡಿ. 31 ಮಧ್ಯಾಹ್ನ 2.30ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ವಾಸುದೇವ ರಾವ್ ಸುರತ್ಕಲ್, ರುದ್ರಯ್ಯ ಆಚಾರ್ಯ ಕೋಟ, ಸದಾಶಿವ ಆಚಾರ್ಯ ಬೈಲೂರು, ಶಂಕರ ಆಚಾರ್ಯ ಕೊಳ್ಯೂರು, ಭಾಸ್ಕರ್ ಜಿ. ಪೂಜಾರಿ ಕಟಪಾಡಿ, ರಾಘು ಎಸ್., ಗುಜರನ್ ಉಚ್ಚಿಲ, ವಾಮನ ಆಚಾರ್ಯ ಬೋವಿಕ್ಕಾನ ಕಾಸರಗೋಡು ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ, ಯಕ್ಷಗಾನ ಕಲಾ ಪೋಷಕ ಎಂ. ಮಿಥುನ್ ರೈ ಭಾಗವಹಿಸುವರು.

ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ , ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಶ್ರೀ ಬೆಳುವಾಯಿ ಸುಂದರ ಆಚಾರ್ಯ, ಮಂಗಳೂರು,ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷ ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ,ಆನೆಗುಂದಿ ಪ್ರತಿಷ್ಠಾನದ ಹಿರಿಯ ವಿಶ್ವಸ್ಥರಾದ ಶ್ರೀ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಶ್ರೀ ಅರವಿಂದ ವೈ. ಆಚಾರ್ಯ ಬೆಳುವಾಯಿ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಶ್ರೀ ಸರಸ್ವತೀ ಪೂರ್ವ ವಿದ್ಯಾರ್ಥಿ ವೃಂದದ ಅಧ್ಯಕ್ಷ ಶ್ರೀ ಕೇಶವ ಶರ್ಮಾ ಇರುವೈಲು ಉಪಸ್ಥಿತರಿರುವರು.


ತಾಳಮದ್ದಳೆ ಸಪ್ತಾಹದ ವಿವರ:
25.12.2023
ಮಧ್ಯಾಹ್ನ ಘಂಟೆ 3.00
ತಾಳಮದ್ದಲೆ :ಪ್ರಸಂಗ ‘ಕಚದೇವಯಾನಿ’
ಹಿಮ್ಮೇಳ : ಭಾಗವತರು : ಶ್ರೀ ಕೆ.ಜೆ. ಗಣೇಶ್, ಮದ್ದಳೆ : ಶ್ರೀ ಕೆ.ಜೆ. ಸುದೀಂದ್ರ, ಚೆಂಡೆ : ಶ್ರೀ ಕೆ.ಜೆ. ಕೃಷ್ಣ
ಕಲಾವಿದರು : ಸರ್ಪಂಗಳ ಶ್ರೀ ಈಶ್ವರ ಭಟ್, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಶ್ರೀ ಗಂಗಾಧರ ಕಳತ್ತೂರು

ಡಿ. 26 : ತಾಳಮದ್ದಲೆ :ಪ್ರಸಂಗ
ವಾಲಿ ಮೋಕ್ಷ’ ಹಿಮ್ಮೇಳ : ಭಾಗವತರು : ಗಣೇಶ್ ಬಿಲ್ಲಾಡಿ, ಮದ್ದಳೆ : ಕೆ.ಜೆ. ಸುದೀಂದ್ರ, ಚೆಂಡೆ : ಕೆ.ಜೆ. ದೀಪ್ತ ಕಲಾವಿದರು : ಶ್ರೀಮತಿ ಸುಲೋಚನಾ ವಿ. ರಾವ್, ಶ್ರೀಮತಿ ಸುಮಿತ್ರಾ ಶಶಿಕಾಂತ ಕಲ್ಲೂರಾಯ, ಶ್ರೀ ಎಸ್. ವಾಸುದೇವ ರಾವ್, ಶ್ರೀ ಅಶೋಕ ನಾಯಕ್ ಸಾಂತೂರು, ಕೆ. ಜನಾರ್ದನ ಆಚಾರ್ಯ

ಡಿ. 27 : ತಾಳಮದ್ದಲೆ :ಪ್ರಸಂಗ
‘ಚೂಡಾಮಣಿ’
ಹಿಮ್ಮೇಳ : ಭಾಗವತರು : ಶ್ರೀ ಕೆ.ಜೆ. ಗಣೇಶ್, ಮದ್ದಳೆ : ಶ್ರೀ ಕೆ.ಜೆ. ಸುದೀಂದ್ರ, ಚೆಂಡೆ : ಶ್ರೀ ಕೆ.ಜೆ. ಕೃಷ್ಣ ಕಲಾವಿದರು : ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ಗಣೇಶ್ ಶೆಟ್ಟಿ ಕನ್ನಡಿ ಕಟ್ಟೆ, ಶ್ರೀ ಕೆ. ಜನಾರ್ದನ ಆಚಾರ್ಯ, ಶ್ರೀ ಅಶೋಕ ನಾಯಕ್ ಸಾಂತೂರು

ಡಿ. 28 : ತಾಳಮದ್ದಲೆ :ಪ್ರಸಂಗ
‘ರಾವಣ ವಧೆ’
ಹಿಮ್ಮೇಳ : ಭಾಗವತರು : ಶ್ರೀ ಆನಂದ ಪೂಜಾರಿ ಕಟಪಾಡಿ, ಮದ್ದಳೆ : ಚಂದ್ರ ಶೇಖರ ಆಚಾರ್ಯ, ಚೆಂಡೆ : ಪ್ರಭಾಕರ ಹೇರೂರು ಕಲಾವಿದರು : ಶ್ರೀ ಶಂಬು ಶರ್ಮಾ ವಿಟ್ಲ, ರಾಧಾಕೃಷ್ಣ ಕಲ್ಚಾರ್, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ರಂಗನಾಥ ಭಟ್

ಡಿ. 29 : ತಾಳಮದ್ದಲೆ :ಪ್ರಸಂಗ
ಶಿವಭಕ್ತ ವೀರಮಣಿ’ ಹಿಮ್ಮೇಳ : ಭಾಗವತರು: ಶ್ರೀ ದೇವರಾಜ ಆಚಾರ್ಯ ಐಕಳ, ಮದ್ದಳೆ: ಶ್ರೀ ಯೋಗೀಶ್ ಆಚಾರ್ಯ ಉಲೇಪಾಡಿ, ಚೆಂಡೆ : ಶ್ರೀ ಅಶೋಕ ಆಚಾರ್ಯ ಉಲೇಪಾಡಿ ಕಲಾವಿದರು : ಶ್ರೀಮತಿ ಪದ್ಮಾ ಕೆ. ಆಚಾರ್ಯ, ಶ್ರೀಮತಿ ಜಯಲಕ್ಷ್ಮೀ ವಿ. ಭಟ್, ಶ್ರೀಮತಿ ಶುಭಾ ಪಿ. ಆಚಾರ್ಯ, ಶ್ರೀಮತಿ ಹಿರಾ ಉದಯ, ಶ್ರೀಮತಿ ಪ್ರೇಮಾ ನೂರಿತ್ತಾಯ

ಡಿ. 30: ತಾಳಮದ್ದಲೆ :ಪ್ರಸಂಗ
ಕೃಷ್ಣ ಸಂಧಾನ
ಹಿಮ್ಮೇಳ : ಭಾಗವತರು : ಶ್ರೀ ಮೋಹನ ಕಲಂಬಾಡಿ, ಮದ್ದಳೆ: ರವಿರಾಜ್ ಜೈನ್, ಚೆಂಡೆ : ವಿಕಾಸ್ ಅಜೆಕಾರ್ ಕಲಾವಿದರು : ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಶ್ರೀ ಚಂದ್ರಶೇಖರ ಕೊಡಿಪಾಡಿ, ಶ್ರೀ ಕೆ. ಜನಾರ್ದನ ಆಚಾರ್ಯ

ಡಿ. 31
ಘಂಟೆ 3.30ರಿಂದ ತಾಳಮದ್ದಲೆ :ಪ್ರಸಂಗ : ಸುಧನ್ವಾರ್ಜುನ ಹಿಮ್ಮೇಳ : ಭಾಗವತರು : ಶ್ರೀ ಕೆ.ಜೆ. ಗಣೇಶ್, ಮದ್ದಳೆ : ಶ್ರೀ ಕೆ.ಜೆ. ಸುದೀಂದ್ರ, ಚೆಂಡೆ : ಶ್ರೀ ಕೆ.ಜೆ. ಕೃಷ್ಣ
ಕಲಾವಿದರು : ಶ್ರೀ ಶಂಬು ಶರ್ಮಾ ವಿಟ್ಲ, ಶ್ರೀ ಸದಾಶಿವ ಆಳ್ವ ತಲಪಾಡಿ, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ಶಂಕರ ಆಚಾರ್ಯ, ಕೊಳ್ಯೂರು

spot_img

More articles

LEAVE A REPLY

Please enter your comment!
Please enter your name here