Monday, November 23, 2026

ಉಡುಪಿ: ಮನೆಗೆ ಕೆಲಸಕ್ಕೆ ಹೋದ ಮಹಿಳೆ ನಾಪತ್ತೆ

Must read

ಉಡುಪಿ: ಮನೆಗೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ 38 ವರ್ಷದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೇಶಾಪುರ ಗ್ರಾಮದವರಾದ ಸುಮಿತ್ರಾ (38), ಪ್ರಸ್ತುತ ಉಡುಪಿಯಲ್ಲಿ ವಾಸವಿದ್ದರು. ಕಲ್ಸಂಕದ ಬಳಿ ಮನೆಯೊಂದರಲ್ಲಿ ಮನೆಗೆಲಸ ಮಾಡುತ್ತಿದ್ದ ಅವರು, ನ.15ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದು, ಇದುವರೆಗೆ ವಾಪಸಾಗಿಲ್ಲ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ನಾಪತ್ತೆಯಾದ ಸುಮಿತ್ರಾ ಅವರು ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹಾಗೂ ಗುಂಡು ಮುಖ ಹೊಂದಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತವರು ಉಡುಪಿ ನಗರ ಪೊಲೀಸ್ ಠಾಣೆ (0820-2520444), ಪೊಲೀಸ್ ನಿಯಂತ್ರಣ ಕೊಠಡಿ (0820-2526444), ಪೊಲೀಸ್ ನಿರೀಕ್ಷಕರು (9480805408) ಅಥವಾ ಪೊಲೀಸ್ ಉಪನಿರೀಕ್ಷಕರು (9080805445) ಅವರನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

spot_img

More articles

LEAVE A REPLY

Please enter your comment!
Please enter your name here