ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ–2026ರ ಅಂಗವಾಗಿ ಶುಕ್ರವಾರ ನಡೆದ ಮುದ್ದುಮಕ್ಕಳ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ಮಲ್ಪೆಯ ತಪಸ್ಯ ನಾಗಾಪ್ರಸಾದ್ ಪ್ರಥಮ ಸ್ಥಾನ ಪಡೆದರು.
ಶಾಲಿನಿ ಡಾ. ಜಿ. ಶಂಕರ್ ಮುಖ್ಯ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ 3ರಿಂದ 9 ವರ್ಷದ 76 ಮಕ್ಕಳು ಶಾರದಾ ಮಾತೆಯ ವೇಷದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಕಿದಿಯೂರಿನ ಸಾನಿಕ ದ್ವಿತೀಯ ಹಾಗೂ ಸುರತ್ಕಲ್ನ ಪ್ರಶ್ವಿ ಎಸ್. ಪುತ್ರನ್ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ ₹8,000, ₹6,000 ಹಾಗೂ ₹4,000 ನಗದು ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಉಳಿದ ಮಕ್ಕಳಿಗೂ ತಲಾ ₹1,000 ಪ್ರೋತ್ಸಾಹಧನ ನೀಡಲಾಯಿತು.


