Friday, October 16, 2026

ಕಟಪಾಡಿ ಅಯ್ಯಪ್ಪ ದೇವಸ್ಥಾನದ ನವೀಕರಣ: ಅಮೃತಶಿಲೆ ಮೆರವಣಿಗೆಗೆ ಚಾಲನೆ

Must read

ಉಡುಪಿ: ಕಟಪಾಡಿಯ ಕುರ್ಕಾಲ್ ಏಣಗುಡ್ಡೆ ರಸ್ತೆಯ ರಿಶಾಲ್ ನಗರದಲ್ಲಿರುವ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ನವೀಕೃತ ಅಮೃತಶಿಲಾಮಯ ದೇವಸ್ಥಾನದ ನಿರ್ಮಾಣ ಕಾರ್ಯದ ಮೊದಲ ಹಂತದ ಅಮೃತಶಿಲೆಯನ್ನು ಗುರುವಾರ ದೇವಸ್ಥಾನದ ನಿರ್ಮಾಣ ಸ್ಥಳಕ್ಕೆ ಭವ್ಯವಾಗಿ ತರಲಾಯಿತು.
ಭಕ್ತವೃಂದದ ಗುರುಸ್ವಾಮಿ ಸುರೇಶ್ ಅವರ ಮಾರ್ಗದರ್ಶನದಲ್ಲಿ, ಪುರೋಹಿತ ಪ್ರಕಾಶ್ ಹೊಳ್ಳ ಮಂಜೇಶ್ವರ ಅವರ ಪೂಜಾ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಿತು. ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ರಿಶಾನ್ ಟಿ. ಅವರ ನೇತೃತ್ವದಲ್ಲಿ ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಹಾಗೂ ವಿಶ್ವನಾಥ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಮಹೇಶ್ ಅಂಚನ್ ಹಸಿರು ನಿಶಾನೆ ತೋರಿಸುವ ಮೂಲಕ ಅಮೃತಶಿಲೆಯ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭಕ್ತವೃಂದದ ಕಾರ್ಯಾಧ್ಯಕ್ಷ ಕೇಶವ ಕುಂದರ್ ಕೊಡವೂರು, ಕಾರ್ಯದರ್ಶಿ ಪ್ರಶಾಂತ್ ಸನಿಲ್, ಅಖಿಲ ಭಾರತ ಅಯ್ಯಪ್ಪ ಸೇವಾ ಸಮಾಜಂನ ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್, ಉಪಾಧ್ಯಕ್ಷ ಸುಂದರ್ ಗುರುಸ್ವಾಮಿ, ಕಟಪಾಡಿ ಬಂಟರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ ಕುದ್ರಾಡಿ, ವಿಶ್ವನಾಥ ಕ್ಷೇತ್ರಾಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ರವಿ ಕೋಟ್ಯಾನ್ ಪಡುಕರೆ, ಸುಭಾಷ್ ಬಲ್ಲಾಲ್, ಅಯ್ಯಪ್ಪ ಸ್ವಾಮಿ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಗೀತಾಂಜಲಿ ಸುವರ್ಣ, ವಿಜಯ ಕೊಡವೂರು, ಹಿರಿಯರಾದ ರಾಘ ಕಲ್ಮಂಜೆ, ಮುಂಬೈ ಅಯ್ಯಪ್ಪ ಸ್ವಾಮಿ ಸಮಿತಿಯ ಗುರುಸ್ವಾಮಿ ಪದ್ಮನಾಭ ಪೂಜಾರಿ, ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯ ಸತೀಶ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಜತ್ತನ್, ಕಾರ್ಯದರ್ಶಿ ಜ್ಯೋತಿ ಪ್ರಶಾಂತ್ ಸೇರಿದಂತೆ ಭಕ್ತವೃಂದದ ಸದಸ್ಯರು, ಭಜನಾ ಮಂಡಳಿಯ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here