Sunday, October 11, 2026

ಅ.13ರಂದು ಉಡುಪಿ- ಉಚ್ಚಿಲ ದಸರಾ ಕುಸ್ತಿ ಪಂದ್ಯಾಕೂಟ: ‘ದಸರಾ ಕೇಸರಿ’, ‘ದಸರಾ ಕುವರಿ’ ಪ್ರಶಸ್ತಿಗೆ ಸೆಣಸಾಟ

Must read

ಉಡುಪಿ: ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಅ.13ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಉಭಯ ಜಿಲ್ಲೆಗಳ ಕುಸ್ತಿಪಟುಗಳಿಗಾಗಿ ಕುಸ್ತಿ ಪಂದ್ಯಾಕೂಟ ಆಯೋಜಿಸಲಾಗಿದೆ. ಬೆಳಿಗ್ಗೆ 8 ಗಂಟೆಗೆ ಸ್ಪರ್ಧೆಗಳು ಆರಂಭವಾಗಲಿವೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಉಚ್ಚಿಲ ದಸರಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿಯು ಪಂದ್ಯಾಕೂಟ ಆಯೋಜಿಸಿದೆ. ಪುರುಷರ ವಿಭಾಗದಲ್ಲಿ ‘ಉಚ್ಚಿಲ ದಸರಾ ಕೇಸರಿ’ ಮತ್ತು ‘ಉಚ್ಚಿಲ ದಸರಾ ಕುಮಾರ್’ ಹಾಗೂ ಮಹಿಳೆಯರ ವಿಭಾಗದಲ್ಲಿ ‘ಉಚ್ಚಿಲ ದಸರಾ ಕುವರಿ’ ಪ್ರಶಸ್ತಿಗಳಿಗಾಗಿ ಸ್ಪರ್ಧೆ ನಡೆಯಲಿದೆ.
ಪುರುಷರ ವಿಭಾಗದಲ್ಲಿ 34ರಿಂದ 38 ಕೆಜಿ, 41, 46, 50, 57, 61 ಮತ್ತು 65 ಕೆಜಿ ತೂಕದ ವಿಭಾಗಗಳಲ್ಲಿ ‘ಉಚ್ಚಿಲ ಕುಮಾರ್’ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯಲಿದೆ. 74 ಕೆಜಿ ವಿಭಾಗದಲ್ಲಿ ‘ಉಚ್ಚಿಲ ದಸರಾ ಕೇಸರಿ’ ಪ್ರಶಸ್ತಿಗಾಗಿ ಸೆಣಸಾಟ ನಡೆಯಲಿದ್ದು, 86 ಕೆಜಿ ಹಾಗೂ 86ರಿಂದ 97 ಕೆಜಿ ವಿಭಾಗಗಳಲ್ಲಿಯೂ ಸ್ಪರ್ಧೆ ಆಯೋಜಿಸಲಾಗಿದೆ.
ಮಹಿಳೆಯರ ವಿಭಾಗದಲ್ಲಿ 32ರಿಂದ 36 ಕೆಜಿ, 43, 46 ಮತ್ತು 53 ಕೆಜಿ ತೂಕದ ವಿಭಾಗಗಳಲ್ಲಿ ‘ಉಚ್ಚಿಲ ದಸರಾ ಕುವರಿ’ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯಲಿದೆ. 59, 65, 68 ಹಾಗೂ 68ರಿಂದ 76 ಕೆಜಿ ತೂಕದ ವಿಭಾಗಗಳಲ್ಲಿಯೂ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧಾಳುಗಳಿಗೆ ಸೂಚನೆ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಿಸಿದ ಕುಸ್ತಿಪಟುಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಸ್ಪರ್ಧಾಳುಗಳು ತೂಕ ಪರಿಶೀಲನೆ ವೇಳೆ ಮೂಲ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಕಡ್ಡಾಯವಾಗಿ ತರಬೇಕು. ಯಾವುದೇ ವಿಭಾಗದಲ್ಲಿ ನಾಲ್ಕಕ್ಕಿಂತ ಕಡಿಮೆ ಸ್ಪರ್ಧಾಳುಗಳಿದ್ದರೆ ಆ ವಿಭಾಗದ ಸ್ಪರ್ಧೆಯನ್ನು ರದ್ದುಗೊಳಿಸಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಾದ ಮೂವರಿಗೆ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಸಂಘಟಕರು ಮತ್ತು ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
ಸ್ಪರ್ಧಾಳುಗಳ ತೂಕ ಪರಿಶೀಲನೆ ಅ.12ರಂದು ಮಧ್ಯಾಹ್ನ 2.30ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ನಿಗದಿತ ಸಮಯದ ಬಳಿಕ ಬರುವವರ ತೂಕ ಪರಿಶೀಲನೆಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ವಿಜಯ ಸುವರ್ಣ (9731052556) ಅವರನ್ನು ಸಂಪರ್ಕಿಸಬಹುದು.

spot_img

More articles

LEAVE A REPLY

Please enter your comment!
Please enter your name here