Saturday, October 10, 2026

ಹಿರಿಯ ನಟ ನಾನಾ ಪಾಟೇಕರ್ ಹೃದಯಾಘಾತದಿಂದ ನಿಧನ

Must read

ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗೋವಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರು, ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗಿನ ಜಾವ 5.20ಕ್ಕೆ ಮಣಿಪಾಲ್‌ ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ನಾನಾ ಪಾಟೇಕ‌ರ್ ಅವರ ಪುತ್ರ ಮಲ್ದಾರ್ ಪಾಟೇಕರ್ ನೀಡಿದ ಮಾಹಿತಿ ಪ್ರಕಾರ, ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟನ ಫ್ಲ್ಯಾಟ್‌ಗೆ ವೈದ್ಯಕೀಯ ತಂಡವನ್ನು ಕಳುಹಿಸಲಾಗಿತ್ತು. ತಂಡ ಸ್ಥಳಕ್ಕೆ ತೆರಳಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಪುನಶ್ಚತನಗೊಳಿಸಲು ವೈದ್ಯಕೀಯ ಸಿಬಂದಿ ಪ್ರಯತ್ನ ನಡೆಸಿದ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಂತರ ನಾನಾ ಪಾಟೇಕ‌ರ್ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಳಗಿನ ಜಾವ 5.20ಕ್ಕೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಪ್ರಕರಣವನ್ನು ವೈದ್ಯಕೀಯ-ಕಾನೂನು ಪ್ರಕರಣವಾಗಿ ದಾಖಲಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಇಂದು ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.
ವಿಶ್ವನಾಥ್‌ ಪಾಟೇಕರ್ ಎಂಬುದು ನಾನಾ ಪಾಟೇಕ‌ರ್ ಅವರ ಮೂಲ ಹೆಸರು. ಹಿಂದಿ ಹಾಗೂ ಮರಾಠಿ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಅವರು ಒಬ್ಬರಾಗಿದ್ದರು. 1978ರಲ್ಲಿ ಬಿಡುಗಡೆಯಾದ ‘ಗಮನ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ‘ಪರಿಂಡಾ’, ‘ಕ್ರಾಂತಿವೀ‌ರ್’, ‘ಅಗ್ನಿಸಾಕ್ಷಿ’, ‘ಖಾಮೋಶಿ: ದಿ ಮ್ಯೂಸಿಕಲ್’, ‘ಅಬ್ ತಕ್ ಛಪ್ಪನ್’ ಹಾಗೂ ‘ನಟಸಮ್ರಾಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ.

ನಾನಾ ಪಾಟೇಕ‌ರ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದು, 2013ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

spot_img

More articles

LEAVE A REPLY

Please enter your comment!
Please enter your name here