Friday, November 6, 2026

ಮಲ್ಪೆಯಲ್ಲಿ ಜಲ ಸಾಹಸಕ್ಕೆ ಹೊಸ ಸ್ಪರ್ಶ: ‘ಓಷನ್ ಅಡ್ವೆಂಚರ್ಸ್’ ಸಂಸ್ಥೆಯಿಂದ ಸಾಹಸ ಕ್ರೀಡೆಗಳ ಸೇವೆ ಆರಂಭ

Must read

ಉಡುಪಿ: ಪ್ರವಾಸಿಗರ ನೆಚ್ಚಿನ ತಾಣ ಮಲ್ಪೆ ಕಡಲತೀರದಲ್ಲಿ ಜಲಸಾಹಸ ಹಾಗೂ ಮನರಂಜನಾ ಕ್ರೀಡೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ‘ಓಷನ್ ಅಡ್ವೆಂಚರ್ಸ್’ ಸಂಸ್ಥೆ ಸೆ.15ರಿಂದ ಸಾಹಸ ಕ್ರೀಡೆಗಳ ಸೇವೆ ಆರಂಭಿಸಿದೆ.
ಮಲ್ಪೆಯಿಂದ ಸೇಂಟ್ ಮೇರಿಸ್ ದ್ವೀಪಕ್ಕೆ ಬೋಟಿಂಗ್ ಸೇರಿದಂತೆ ಜೆಟ್ ಸ್ಕೀ ರೈಡ್, ಪ್ಯಾರಾಸೈಲಿಂಗ್, ಬನಾನಾ ರೈಡ್, ಎಟಿವಿ ಸ್ಯಾಂಡ್ ಬೈಕ್, ಜಾರ್ಬಿಂಗ್, ಡಿಸ್ಕೋ ಬೋಟ್ ರೈಡ್ ಹಾಗೂ ಬಂಪಿ ರೈಡ್‌ಗಳಂತಹ ವಿವಿಧ ಸಾಹಸ ಚಟುವಟಿಕೆಗಳನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ.
ಸಮುದ್ರದ ಅಲೆಗಳ ನಡುವೆ ರೋಮಾಂಚನಕಾರಿ ಅನುಭವ ಪಡೆಯಲು ಬಯಸುವ ಪ್ರವಾಸಿಗರು ಹಾಗೂ ಕುಟುಂಬಗಳಿಗೆ ವಿವಿಧ ರೀತಿಯ ಸಾಹಸ ಚಟುವಟಿಕೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅನುಭವಿ ಸಿಬ್ಬಂದಿ ಹಾಗೂ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರವಾಸಿಗರು ಮುಂಗಡ ಕಾಯ್ದಿರಿಸುವಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9686572576 ಸಂಖ್ಯೆಯನ್ನು ಸಂಪರ್ಕಿಸಬಹುದು. ಇನ್‌ಸ್ಟಾಗ್ರಾಂನಲ್ಲಿ oceanadventures_malpe ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.

spot_img

More articles

LEAVE A REPLY

Please enter your comment!
Please enter your name here