ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಜೇಶ್ ಸುವರ್ಣ ನೇತೃತ್ವದ ತುಳುನಾಡ ಟೈಗರ್ಸ್ ಉಡುಪಿ ವತಿಯಿಂದ ಆಯೋಜಿಸಲಾಗುತ್ತಿರುವ 6ನೇ ವರ್ಷದ ಹುಲಿವೇಷ ಕುಣಿತದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನದಲ್ಲಿ ನಡೆಯಿತು.
ನಗರಸಭೆಯ ಮಾಜಿ ಸದಸ್ಯ ಹಾಗೂ ಉದ್ಯಮಿ ಬಾಲಕೃಷ್ಣ ಶೆಟ್ಟಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹೇಶ್ ಬೈಲೂರು, ಮದನ್ ಮಣಿಪಾಲ್, ಸುಕೇಶ್ ರಾಜ್, ಜಯಂತ್ ಸುವರ್ಣ, ನಾರಾಯಣ ಪೂಜಾರಿ, ರಾಜೇಶ್ ಸುವರ್ಣ, ಅಕ್ಷಯ ಕೋಟ್ಯಾನ್, ಪ್ರಸನ್ನ ಆಚಾರ್ಯ, ಪ್ರವೀಣ್, ರಕ್ಷಿತ್, ರಕ್ಷಾ, ದಿವಾಕರ್ ಪೂಜಾರಿ, ಶೇಖರ್, ಚಿತ್ತರಂಜನ್, ಹರೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


