Wednesday, July 29, 2026

ಕಾಪು: ಟೈಮಿಂಗ್ ವಿಚಾರಕ್ಕೆ ಬಸ್ ಸಿಬ್ಬಂದಿ ನಡುವೆ ಗಲಾಟೆ; ನಾಲ್ವರು ವಶಕ್ಕೆ

Must read

ಉಡುಪಿ: ಬಸ್ ಟೈಮಿಂಗ್ ವಿಚಾರವಾಗಿ ಎರಡು ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ಸಾರ್ವಜನಿಕ ರಸ್ತೆಯಲ್ಲಿ ಗಲಾಟೆ ನಡೆದ ಘಟನೆ ಸೋಮವಾರ ಕಾಪು ಹೊಸ ಮಾರಿಗುಡಿ ಅಂಡರ್‌ಪಾಸ್ ಸಮೀಪದ ಬಸ್ ನಿಲ್ದಾಣದ ಎದುರು ಸಂಭವಿಸಿದೆ.
KA-20 AB-5493 ನೋಂದಣಿಯ ಸಂದೇಶ್ ಬಸ್ ಹಾಗೂ KA-19 AE-1095 ನೋಂದಣಿಯ ಆನಂದ್ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಪರಸ್ಪರ ಬಸ್‌ಗಳನ್ನು ತಾಗಿಸಿಕೊಂಡು, ಕೈ-ಕೈ ಮಿಲಾಯಿಸಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಪಡಿಸಿದ ಆರೋಪ ಕೇಳಿಬಂದಿದೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕರಾದ ರಮೇಶ್ ಮತ್ತು ಅಭಿಷೇಕ್ ಹಾಗೂ ನಿರ್ವಾಹಕರಾದ ವಿಜಯಕುಮಾರ್ ಮತ್ತು ಹರೀಶ್ ಬಿ. ಹೆಗ್ಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಗಲಾಟೆಗೆ ಸಂಬಂಧಿಸಿದ ಎರಡು ಬಸ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here