Monday, September 7, 2026

ಉಡುಪಿಯಲ್ಲಿ ಜುಲೈ 31ರಿಂದ ‘ಸ್ವದೇಶಿ ಖಾದ್ಯ ಮೇಳ’; ಸ್ಟಾಲ್‌ ಬುಕ್ಕಿಂಗ್ ಆರಂಭ

Must read

ಉಡುಪಿ: ಶಕ್ತಿ ಈವೆಂಟ್ಸ್ ಆಶ್ರಯದಲ್ಲಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಇದೇ ಜುಲೈ 31ರಿಂದ ಆಗಸ್ಟ್ 2ರವರೆಗೆ ಆಯೋಜಿಸಲಾಗುತ್ತಿರುವ ಮೂರು ದಿನಗಳ ‘ಸ್ವದೇಶಿ ಖಾದ್ಯ ಮೇಳ’ಕ್ಕೆ ಸ್ಟಾಲ್‌ ಬುಕ್ಕಿಂಗ್ ಆರಂಭವಾಗಿದೆ.
ಉಡುಪಿ ಜನಪ್ರಿಯ ಜನಸೇವಕರೂ, ಅನೇಕ ದೈವ–ದೇವಸ್ಥಾನಗಳ ಜೀರ್ಣೋದ್ಧಾರದ ರೂವಾರಿಯೂ ಹಾಗೂ ಜಲದುರ್ಗ ಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರೂ ಆದ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಸಾರಥ್ಯದಲ್ಲಿ ಮೇಳ ಆಯೋಜಿಸಲಾಗುತ್ತಿದೆ.
ಮೇಳದಲ್ಲಿ ಸ್ವದೇಶಿ ತಿಂಡಿ–ತಿನಿಸುಗಳು, ಕರಕುಶಲ ವಸ್ತುಗಳು, ಫ್ಯಾನ್ಸಿ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು, ಮಸಾಲೆ ಪದಾರ್ಥಗಳು ಹಾಗೂ ಇತರೆ ಸ್ವದೇಶಿ ಉತ್ಪನ್ನಗಳಿಗೆ ಸ್ಟಾಲ್‌ಗಳನ್ನು ಕಲ್ಪಿಸಲಾಗಿದೆ.
ಮೂರು ದಿನಗಳ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸ್ಥಳೀಯ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ವ್ಯಾಪಾರ ವಿಸ್ತರಿಸಿಕೊಳ್ಳಲು ಉತ್ತಮ ಅವಕಾಶ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸ್ಟಾಲ್‌ ಬುಕ್ಕಿಂಗ್‌ಗಾಗಿ 80734 97446 ಹಾಗೂ 63668 61816 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ

spot_img

More articles

LEAVE A REPLY

Please enter your comment!
Please enter your name here