ಉಡುಪಿ: ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ; ಅವು ಸಮಾಜದ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಐಕ್ಯತೆಯನ್ನು ಉಳಿಸುವ ಕೇಂದ್ರಗಳಾಗಿವೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಹೀರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವರ ಜೀರ್ಣೋದ್ದಾರ ಸಮಿತಿ ವತಿಯಿಂದ ಆಯೋಜಿಸಿದ್ದ ದೇವಾಲಯದ ಜೀರ್ಣೋದ್ದಾರ ಸಂಬಂಧಿತ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶತಮಾನಗಳ ಇತಿಹಾಸ ಹೊಂದಿರುವ ದೇವಾಲಯಗಳ ಜೀರ್ಣೋದ್ಧಾರವು ಕೇವಲ ಕಟ್ಟಡದ ನವೀಕರಣವಲ್ಲ. ಪೂರ್ವಜರು ಕಟ್ಟಿಕೊಟ್ಟ ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಮಹತ್ವದ ಕಾರ್ಯವಾಗಿದೆ. ಇಂತಹ ಪುಣ್ಯ ಕಾರ್ಯಗಳಿಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಜೀರ್ಣೋದ್ದಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಮಿತಿಯ ಪದಾಧಿಕಾರಿಗಳು, ದಾನಿಗಳು, ಗ್ರಾಮಸ್ಥರು ಹಾಗೂ ಭಕ್ತರ ಸೇವೆಯನ್ನು ಶ್ಲಾಘಿಸಿದ ಅವರು, ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯಕ್, ಖಜಾಂಚಿ ಚಂದ್ರಶೇಖರ್ ನಾಯಕ್ ಸೇರಿದಂತೆ ಸಮಿತಿಯ ಪ್ರಮುಖ ಪದಾಧಿಕಾರಿಗಳಾದ ಸೀತಾರಾಮ್ ಭಟ್, ಖಜಾಂಚಿ ಚಂದ್ರಶೇಖರ್ ನಾಯಕ್, ಜಯಪ್ರಕಾಶ್ ನಾಯಕ್, ಪಾಂಡುರಂಗ ಲಗ್ವಾಂಕರ್ , ಮಂದಾರ ಮೋಘೆ, ಶಿಲ್ಪಿ ಕುಪ್ಪು ಸ್ವಾಮಿ, ಪಾಂಡುರಂಗ ಲಾಗ್ವಂಕರ್ , ಶ್ರೀಧರ ಭಟ್, ರಾಜಾರಾಮ್ ಭಟ್, ಹರೀಶ್ ಶೆಟ್ಟಿ, ಕಾಳಿದಾಸ್ ಭಂಡಾರಿ, ಕೃಷ್ಣ ಭಂಡಾರಿ, ಮಹೇಶ್ ಭಟ್, ಅಶೋಕ್ ನಾಯಕ್, ಶ್ರೀಧರ ನಾಯ್ಕ್, ಹರ್ಷಿತ್ ಆಚಾರ್ಯ, ರಮೇಶ್ ನಾಯಕ್ ಕಾಳಬೆಟ್ಟು, ವಾಸುದೇವ ನಾಯಕ್, ಸತೀಶ್ ಶೆಟ್ಟಿ, ಬಾಲಕೃಷ್ಣ ಭಟ್, ಮಹೇಶ್ ಪುತ್ರನ್, ಸುಧೀರ್ ಪೂಜಾರಿ, ಭಾಸ್ಕರ್ ಕುಲಾಲ್, ಮೊದಲಾದವರು ಉಪಸ್ಥಿತರಿದ್ದರು.

