Wednesday, May 27, 2026

ಮೇ 25 ರಂದು ಕುಂದಾಪುರ-ಗುಡ್ಡೆಂಗಡಿಯಲ್ಲಿ “SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್” ಶುಭಾರಂಭ

Must read

ಉಡುಪಿ: ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ, ಗುಡ್ಡೆಂಗಡಿಯಲ್ಲಿ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಮೇ 25ರಂದು ಶುಭಾರಂಭಗೊಳ್ಳಲಿದೆ.

ಈ ಕೇಂದ್ರವನ್ನು ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ SKF Elixer India Pvt. ಮೂಡಬಿದ್ರಿ ಸಂಯುಕ್ತವಾಗಿ ಸ್ಥಾಪಿಸಿ ನಿರ್ವಹಿಸಲಿವೆ. ಇಂದಿನ ಕೈಗಾರಿಕಾ ಕ್ಷೇತ್ರದ ಅಗತ್ಯಗಳನ್ನು ಮನಗಂಡು, ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ರೂಪಿಸುವುದು ಇದರ ಪ್ರಮುಖ ಗುರಿಯಾಗಿದೆ.

ಕೈಗಾರಿಕಾ ತರಬೇತಿಯ ಜೊತೆಗೆ ಸೃಜನಾತ್ಮಕ ವೃತ್ತಿಜೀವನಕ್ಕೂ ಅವಕಾಶ: AI ಮತ್ತು ಆಟೋಮೇಶನ್ ಯುಗಕ್ಕೆ ಕೌಶಲ್ಯಾಧಾರಿತ ತರಬೇತಿ AI ಮತ್ತು ಆಟೋಮೇಶನ್ ಯುಗದಲ್ಲಿ ಕೈಗಾರಿಕೆಗಳು ಪದವೀಧರರಿಗಿಂತ ಕೌಶಲ್ಯ ಹೊಂದಿದ ಪರಿಣಿತರನ್ನು ಹೆಚ್ಚಿನ ಪ್ರಮಾಣದಲ್ಲಿ ಹುಡುಕುತ್ತಿವೆ. ಈ ಹಿನ್ನೆಲೆಯಲ್ಲಿ ಒಂದು ವರ್ಷದ ಉದ್ಯೋಗಾಧಾರಿತ ಪ್ರಮಾಣಪತ್ರ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.

ತಾಂತ್ರಿಕ ಕೋರ್ಸ್‌ಗಳು

ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್

ಫಿಟ್ಟಿಂಗ್ & ವೆಲ್ಡಿಂಗ್

ಮೆಕ್ಯಾನಿಕ್ – ರೆಫ್ರಿಜರೇಶನ್, ಏರ್ ಕಂಡೀಷನಿಂಗ್ ಹಾಗೂ ಪ್ಲಂಬಿಂಗ್

ಫ್ಯಾಷನ್ ಡಿಸೈನ್ ಕೋರ್ಸ್
ಮಹಿಳೆಯರಿಗಾಗಿ ವಿಶೇಷವಾಗಿ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡಲಾಗುತ್ತಿದ್ದು, ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಲಾಗುತ್ತದೆ.
ಮಾನ್ಯತೆ Affiliation: Indian Technical Educational Society (ITES), Mumbai
ಅರ್ಹತೆ SSLC ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪಾಸ್ ಅಥವಾ ಫೇಲ್ ಎಂಬ ವ್ಯತ್ಯಾಸವಿಲ್ಲ.

ತರಬೇತಿಯ ವೈಶಿಷ್ಟ್ಯಗಳು

ತತ್ವಾಧಾರಿತ ಹಾಗೂ ಪ್ರಾಯೋಗಿಕ ತರಬೇತಿ

ನೈಜ ಕೈಗಾರಿಕಾ ವಾತಾವರಣದಲ್ಲಿ ಕಲಿಕೆ

ಪ್ರತಿಬ್ಯಾಚ್‌ಗೆ 20 ವಿದ್ಯಾರ್ಥಿಗಳ ಮಿತಿ

ವೈಯಕ್ತಿಕ ಮಾರ್ಗದರ್ಶನ

ಅನುಭವಿ ಶಿಕ್ಷಕರಿಂದ ತರಬೇತಿ

ಇಂಟರ್ನ್‌ಶಿಪ್ ಮತ್ತು ಕೈಗಾರಿಕಾ ಅನುಭವ
ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ SKF Elixer India Pvt. Ltd., ಮೂಡಬಿದ್ರಿಯಲ್ಲಿ 3 ತಿಂಗಳ ಇಂಟರ್ನ್‌ಶಿಪ್ ಅವಕಾಶ ಕಲ್ಪಿಸಲಾಗುತ್ತದೆ.
ಜೊತೆಗೆ ಉತ್ಪಾದನಾ ವಿಧಾನ, ಗುಣಮಟ್ಟ ಪರಿಶೀಲನೆ ಮತ್ತು ಪ್ರಾಜೆಕ್ಟ್ ಅನುಭವ ಪಡೆಯುವ ಅವಕಾಶವೂ ಇರುತ್ತದೆ.
ಉದ್ಯೋಗ ಸಹಾಯ ಮತ್ತು ಮಾರ್ಗದರ್ಶನ

ಭಾರತಾದ್ಯಂತ ಉದ್ಯೋಗ ವ್ಯವಸ್ಥೆ

ವಿದೇಶಿ ಉದ್ಯೋಗಾವಕಾಶಗಳ ಮಾಹಿತಿ

ಕೈಗಾರಿಕಾ ಒಪ್ಪಂದ ಮಾರ್ಗದರ್ಶನ (ಆಸ್ಟ್ರೇಲಿಯಾ ಸೇರಿ).

ಈ ಕೌಶಲ್ಯ ತರಭೇತಿ ಪಡೆದ ನಂತರ ಏನು ಮಾಡಬಹುದು?
🔵 ಕಡಿಮೆ ಹೂಡಿಕೆಯಲ್ಲಿ ಸ್ವ ಉದ್ಯೋಗ ಆರಂಭಿಸುವ ಅವಕಾಶ
🔵 ಮನೆಯಿಂದಲೇ ಕೆಲಸ ಮಾಡುವ ಅವಕಾಶ
🔵 ಸದಾ ಬೇಡಿಕೆಯಲ್ಲಿರುವ ಕೌಶಲ್ಯ.

ಮಹಿಳೆಯರಿಗೆ ದೊರೆಯುವ ಕೌಶಲ್ಯ ತರಭೇತಿ?
🔵 ಸ್ಕಿಲ್ಡ್ ಟೈಲರಿಂಗ್ & ಫ್ಯಾಷನ್ ಡಿಸೈನಿಂಗ್ .
🔵 ಉಡುಪು ತಯಾರಿಕೆ ಮತ್ತು ಪ್ಯಾಟರ್ನ್ ಮೇಕಿಂಗ್
 ಟೆಕ್ಸ್ಟೈಲ್ ಬಟ್ಟೆಗಳ ಮೂಲ ಮಾಹಿತಿ
🔵 ಹ್ಯಾಂಡ್ & ಮಷಿನ್ ಎಂಬ್ರಾಯ್ಡರಿ
🔵 ಫ್ಯಾಷನ್ ಇಲಸ್ಟ್ರೇಷನ್
 ಡ್ರೇಪಿಂಗ್ ತಂತ್ರಗಳು
🔵 ಫ್ಯಾಷನ್ ಟ್ರೆಂಡ್ಸ್ & ಸ್ಟೈಲಿಂಗ್

ಮುಂದೆ ಯಾವುದೆಲ್ಲ ಉದ್ಯೋಗ ಅವಕಾಶಗಳು ದೊರೆಯಬಹುದು?
 🔵ಬೂಟಿಕ್ ಮತ್ತು ಫ್ಯಾಷನ್ ಸ್ಟುಡಿಯೋಗಳು
 ಗಾರ್ಮೆಂಟ್ ತಯಾರಿಕಾ ಸಂಸ್ಥೆಗಳು
🔵 ಟೈಲರಿಂಗ್ ಮತ್ತು ಅಲ್ಟರೇಷನ್ ಕೇಂದ್ರಗಳು
🔵 ರಿಟೇಲ್ ಮತ್ತು ಫ್ಯಾಷನ್ ಮಳಿಗೆಗಳು

ಸ್ವ ಉದ್ಯೋಗ ಆರಂಭಿಸುವ ಅವಕಾಶ

ಸ್ವಂತ ಬೂಟಿಕ್ ಆರಂಭಿಸಬಹುದು
🔵 ಮನೆಯಿಂದಲೇ ಟೈಲರಿಂಗ್ ಕೆಲಸ ಆರಂಭಿಸಬಹುದು
🔵 ಬ್ಲೌಸ್, ಯೂನಿಫಾರ್ಮ್ ಹಾಗೂ ಡಿಸೈನರ್ ಉಡುಪುಗಳ ಕಸ್ಟಮ್ ಆರ್ಡರ್ ಪಡೆಯಬಹುದು
🔵 ಆನ್‌ಲೈನ್ ಫ್ಯಾಷನ್ ವೇದಿಕೆಗಳೊಂದಿಗೆ ಕೆಲಸ ಮಾಡುವ ಅವಕಾಶ.

ಡಾ.ಜಿ.ರಾಮಕೃಷ್ಣ ಆಚಾರ್ ಅವರ ಪ್ರೇರಣಾದಾಯಕ ಪಯಣ
ಖ್ಯಾತ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಅವರು ಗುಡ್ಡೆಂಗಡಿಯಲ್ಲಿ ಹುಟ್ಟಿ ಬೆಳೆದವರು. ತಮ್ಮ ಪರಿಶ್ರಮ, ತಾಂತ್ರಿಕ ತರಬೇತಿ ಮತ್ತು ಕೈಗಾರಿಕಾ ಅನುಭವದ ಮೂಲಕ ಜಾಗತಿಕ ಮಟ್ಟದ ಉದ್ಯಮಗಳನ್ನು ನಿರ್ಮಿಸಿರುವ ಅವರ ಜೀವನಯಾತ್ರೆಯೇ ಈ ಕೇಂದ್ರದ ಪ್ರೇರಣೆಯಾಗಿದೆ.
ಈ ಕುರಿತು ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಆಚಾರ್ ಅವರು, “ನಮ್ಮ ಕೇಂದ್ರದಲ್ಲಿ ನೀಡುವ ತರಬೇತಿ ಸಂಪೂರ್ಣ ಕೌಶಲ್ಯಾಧಾರಿತವಾಗಿದೆ. ಇಂಟರ್ನ್‌ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ನೈಜ ಕೈಗಾರಿಕಾ ಅನುಭವ ಸಿಗುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಉದ್ಯೋಗಾವಕಾಶಗಳನ್ನು ಸುಲಭಗೊಳಿಸುತ್ತದೆ. ಅವಕಾಶಗಳಿಗಾಗಿ ಕಾಯದೆ, ಅವಕಾಶಗಳನ್ನು ಸೃಷ್ಟಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು”ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9187492550
ಗುಡ್ಡೆಂಗಡಿ, ಯಡ್ಯಾಡಿ- ಮತ್ಯಾಡಿ ಪೋಸ್ಟ್, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ – 576222

spot_img

More articles

LEAVE A REPLY

Please enter your comment!
Please enter your name here