Monday, May 18, 2026

ಮಲಬಾರ್ ಗೋಲ್ದ್ ನಲ್ಲಿ ಬ್ರಾಂಡ್ ವಾಚ್‌ಗಳ ವಿಶೇಷ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ

Must read

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಉಡುಪಿ ಶಾಖೆಯಲ್ಲಿ ಜೂ.1ರವರೆಗೆ ಹಮ್ಮಿಕೊಳ್ಳಲಾಗಿರುವ ಪ್ರಸಿದ್ಧ ವಾಚ್ ಬ್ರಾಂಡ್‌ಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮೇ 15ರಂದು ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಉದ್ಯಮಿಗಳಾದ ಯಾಕೂಬ್, ಸತೀಶ್ ಹೆಗ್ಡೆ, ಅಶ್ರಫ್,ಶೇಖ್ ವಹೀದ್, ಕಿರಣ್ ಶೆಟ್ಟಿ, ಇರ್ಫಾನ್ ಮೇಳವನ್ನು ಉದ್ಘಾಟಿಸಿ ವಿವಿಧ ಬ್ರಾಂಡ್‌ಗಳ ವಾಚ್‌ಗಳನ್ನು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಉದ್ಯಮಿ ಅಶ್ರಫ್, ಈ ರೀತಿಯ ಬ್ರಾಂಡ್‌ಗಳ ವಾಚ್‌ಗಳು ಒಂದೇ ಕಡೆ ಸಿಗಬೇಕಾದರೆ ದೂರದ ಬೆಂಗಳೂರಿಗೆ ಹೋಗ ಬೇಕಾಗಿತ್ತು. ಇದೀಗ ಮಲಬಾರ್ ಗೋಲ್ಡ್ ಆ ಅವಕಾಶವನ್ನು ಉಡುಪಿಯಲ್ಲಿ ಮಾಡಿಕೊಟ್ಟಿದೆ. ಒಂದಕ್ಕೊಂದು ಮೀರಿಸುವ ಶೈಲಿಯ ಆಕರ್ಷಕ ವಾಚ್‌ಗಳು ಇಲ್ಲಿವೆ ಎಂದು ಹೇಳಿದರು.
ಉದ್ಯಮಿ ಸತೀಶ್ ಹೆಗ್ಡೆ, ಮಲಬಾರ್ ಗೋಲ್ಡ್ ಜೊತೆ ವ್ಯವಹಾರಿಕ ಮಾತ್ರವಲ್ಲ, ಭಾವನಾತ್ಮಕ ಸಂಬಂಧ ಕೂಡ ಇದೆ. ಮಲಬಾರ್ ಗೋಲ್ಡ್ ಅವರ ಸೇವೆ ಅತ್ಯುನ್ನತವಾದುದು. ವ್ಯವಹಾರದ ಜೊತೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಮೇಳದಲ್ಲಿ ಅತ್ಯುನ್ನತ ಬ್ರಾಂಡ್‌ಗಳ ವಾಚ್‌ಗಳು ಒಂದೇ ಸೂರಿನಲ್ಲಿ ಸಿಗುವುದರಿಂದ ಸಾಕಷ್ಟು ಅವಕಾಶಗಳಿವೆ. ಈ ಮೇಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಮಲಬಾರ್ ವಾಚಸ್‌ನ ಪ್ರಧಾನ ವ್ಯವಸ್ಥಾಪಕ ವಿಶ್ವ ಮೋಹನ್, ಪ್ರದರ್ಶನ ಮೇಳ ಹಾಗೂ ವಿವಿಧ ಬ್ರಾಂಡ್‌ನ ವಾಚ್‌ಗಳ ಕುರಿತು ಮಾಹಿತಿ ನೀಡಿದರು. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಂಗಳೂರು ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ವಂದಿಸಿದರು. ಸಿಬ್ಬಂದಿ ವಿಘ್ನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಶಾಖಾ ಮುಖ್ಯಸ್ಥ ವಿಜಯ ಕುಮಾರ್ ಡಿ,ಮಲಬಾರ್ ವಾಚ್ ನ ಹಿರಿಯ ವ್ಯವಸ್ಥಾಪಕ ಅಬ್ದುಲ್ ವಹೀದ್, ವ್ಯವಸ್ಥಾಪಕ ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು.

ಮೇಳದಲ್ಲಿ ಸುಮಾರು 17ಕ್ಕೂ ಅಧಿಕ ಪ್ರಸಿದ್ಧ ವಾಚ್ ಬ್ರಾಂಡ್‌ಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು,
ಈ ವಿಶೇಷ ಸಂದರ್ಭದಲ್ಲಿ ವಿವಿಧ ಮಾದರಿಗಳ ಪ್ರೀಮಿಯಂ ವಾಚ್‌ಗಳು ಆಕರ್ಷಕ ದರದಲ್ಲಿ ಶೇ.೫೦ರ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಅದರೊಂದಿಗೆ ಉಚಿತ ಬ್ಯಾಟರಿ ಹಾಗೂ ಪಾಲಿಶ್ ಸೇವೆ ಕೂಡ ಲಭ್ಯ ಇವೆ.

spot_img

More articles

LEAVE A REPLY

Please enter your comment!
Please enter your name here