Friday, May 15, 2026

ಸಂತೆಕಟ್ಟೆ: ಇಂದಿನಿಂದ ಹಲಸು ಮತ್ತು ಹಣ್ಣು ಮೇಳ

Must read

ಉಡುಪಿ: ಸಂತೆಕಟ್ಟೆ ಕೆಮ್ಮಣ್ಣು ಲಿಟ್ಲ್ ಫ್ಲವರ್ ಹಾಲ್ ನಲ್ಲಿ ಮೇ 8ರಿಂದ 10ರ ವರೆಗೆ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಲಾಗಿದೆ ಎಂದು ಮೇಳದ ಆಯೋಜಕ ಮುಹಮ್ಮದ್ ಮುಕ್ತಾರ್ ಹುಸೇನ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ಈ ನಾಲ್ಕು ತಳಿಯ ಹಲಸು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಹಲಸಿನ ಹಣ್ಣನ್ನು ಆಂಧ್ರಪ್ರದೇಶದಿಂದ ತರಿಸಲಾಗಿದೆ. ಇದರ ಜೊತೆಗೆ ಹಲಸಿನ ಸಂಡಿಗೆ, ಹಪ್ಪಳ, ದೋಸೆ, ಹೋಳಿಗೆ, ಜಿಲೇಬಿ ಹಾಗೂ ವಿವಿಧ ಹಲಸಿನ ಉತ್ಪನ್ನಗಳ ಮಾರಾಟ ನಡೆಯಲಿದೆ ಎಂದರು.
ಈ ಮೇಳದಲ್ಲಿ 31ಕ್ಕಿಂತಲೂ ಅಧಿಕ ಸ್ಟಾಲ್ ಗಳು ಇರಲಿದ್ದು, ಹಲಸಿನ ಹಣ್ಣಿನ ಸ್ಟಾಲ್ ಜೊತೆಗೆ ಮಾವಿನ ಹಣ್ಣು, ಕಲ್ಲಂಗಡಿ, ಫೈನಾಫಲ್ ಹಣ್ಣಿನ ಸ್ಟಾಲ್ ಇರಲಿದೆ. ಸ್ಥಳೀಯ ಹಾಗೂ ವಿವಿಧ ಜಿಲ್ಲೆಯ ರುಚಿಯಾದ ಮಾವಿನಹಣ್ಣು ಲಭ್ಯವಿರಲಿದೆ. ಫ್ಯಾನ್ಸಿ, ಬಟ್ಟೆ ಹಾಗೂ ವಿವಿಧ ಉತ್ಪನ್ನಗಳ ಸ್ಟಾಲ್ ಕೂಡ ಇರಲಿದೆ. ಹಾಗೆಯೇ ಸಂಜೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8762113078, 9620428158 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮುಸ್ತಫಾ, ರಿಫಾತ್, ರಾಹಿನ್, ರತ್ನಾಕರ್ ಉಪಸ್ಥಿತರಿದ್ದರು.
 

spot_img

More articles

LEAVE A REPLY

Please enter your comment!
Please enter your name here