Tuesday, September 17, 2024

ಉಡುಪಿ: ಕುಖ್ಯಾತ ಅಂತರ್ ಜಿಲ್ಲಾ ಮನೆಗಳ್ಳತನ ಆರೋಪಿಯ ಬಂಧನ; 46.67 ಲಕ್ಷ ಮೌಲ್ಯದ ಸೊತ್ತು ವಶ

Must read

ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಉತ್ತರಹಳ್ಳಿಯ ಮಂಜುನಾಥ್ ಯಾನೆ ಕಲ್ಕೆರೆ ಮಂಜ (43) ಬಂಧಿತ ಆರೋಪಿ. ಈತ ಅ.8ರಂದು ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ದಾಸ್ ನಾಯಕ್ ಅವರ ಮನೆಯ ಬಾಗಿಲು ಮುರಿದು, ಬೆಡ್ ರೂಮ್ ನ ಅಲ್ಮೇರಾದಲ್ಲಿದ್ದ ಸುಮಾರು 66,36,300 ರೂ. ಮೌಲ್ಯದ ಅಂದಾಜು 1882 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,70,500 ರೂ. ಮೌಲ್ಯದ 7,450 ಗ್ರಾಂ ತೂಕದ ಬೆಳ್ಳಿಯ ಸೊತ್ತುಗಳು ಸಹಿತ ಒಟ್ಟು 73,06,800 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಪಿಎಸ್ ಐ ಪುನೀತ್ ಕುಮಾರ್ ಬಿ.ಇ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಗೆ ಇಳಿದ ಪೊಲೀಸರು ಅ.31ರಂದು ಉಡುಪಿ ಬಲಾಯಿಪಾದೆಯ ಜಂಕ್ಷನ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 31,55,930 ರೂ. ಮೌಲ್ಯದ 530.909 ಗ್ರಾಪಂ ತೂಕದ ಚಿನ್ನಾಭರಣ ಹಾಗೂ 15,12,000 ರೂ. ಮೌಲ್ಯದ 16.800 ಕೆ.ಜಿ. ತೂಕದ ಬೆಳ್ಳಿಯ ಸೊತ್ತುಗಳು ಮತ್ತು ಕಳ್ಳತನಕ್ಕೆ ಬಳಸಿದ್ದ 2,50,000 ಮೌಲ್ಯದ ಈಕೊ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಬ್ರಹ್ಮಾವರ, ತರೀಕೆರೆ, ಅರಸೀಕೆರೆ ಮತ್ತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡ ಭಾಗಿಯಾಗಿದ್ದಾನೆ. ಅಲ್ಲದೆ, ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ

spot_img

More articles

LEAVE A REPLY

Please enter your comment!
Please enter your name here